ಲಾಲಿಗ: ಬಾರ್ಸಿಲೋನಾಗೆ ಜಯ ಬಾರ್ಸಿಲೋನಾ: ಪಿಯರ್ ಎಮರಿಕ್‌ ಅಬಾಮೆಯಂಗ್ ಗಳಿಸಿದ ಏಕೈಕ ಗೋಲಿನ ಬಲದಿಂದ ಬಾರ್ಸಿಲೋನಾ ತಂಡವು ಲಾಲಿಗಾ ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ರಿಯಲ್ ಸೋಸೈಡೆಡ್‌ ತಂಡವನ್ನು ಮಣಿಸಿತು. ಇಲ್ಲಿ ನಡೆದ ಪಂದ್ಯದಲ್ಲಿಅಬಾಮೆಯಂಗ್ 11ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಜಯದೊಂದಿಗೆ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ನಾಲ್ಕರೊಳಗಿನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಸದ್ಯ ಬಾರ್ಸಿಲೋನಾ ತಂಡದ ಬಳಿ 63 ಪಾಯಿಂಟ್‌ಗಳಿವೆ. ರಿಯಲ್ ಮ್ಯಾಡ್ರಿಡ್‌ (78) ಮೊದಲ ಸ್ಥಾನದಲ್ಲಿದೆ. ಪ್ರೀಮಿಯರ್ ಲೀಗ್;ಅಗ್ರಸ್ಥಾನಕ್ಕೆ ಮ್ಯಾಂಚೆಸ್ಟರ್ ಸಿಟಿ: ದ್ವಿತೀಯಾರ್ಧದ ಅವಧಿಯಲ್ಲಿ ಮೂರು ಗೋಲು ದಾಖಲಿಸಿದ ಮ್ಯಾಂಚೆಸ್ಟರ್ ಸಿಟಿ ತಂಡವು 3–0ರಿಂದ ಬ್ರೈಟನ್ ತಂಡವನ್ನು ಮಣಿಸಿತು. ಈ ಜಯದೊಂದಿಗೆ ಪ್ರೀಮಿಯರ್‌ ಲೀಗ್‌ನಲ್ಲಿ ಅಗ್ರಸ್ಥಾನ ಗಳಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.