ವಿಶ್ವಕಪ್ ಫುಟ್‌ಬಾಲ್ ಮುಖ್ಯ ಸುತ್ತಿಗೆ ಜಪಾನ್‌ ಸಿಡ್ನಿ: ಬದಲಿ ಆಟಗಾರ ಕೌರು ಮಿಮೊಟ ಗಳಿಸಿದ ಎರಡು ಗೋಲುಗಳಿಂದ ಜಪಾನ್ ತಂಡ ಆಸ್ಟ್ರೇಲಿಯಾವನ್ನು 2–0ಯಿಂದ ಮಣಿಸಿತು. ಈ ಮೂಲಕ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸಿತು. ಇದು, ಸೌದಿ ಅರೆಬಿಯಾದ ಹಾದಿಯನ್ನೂ ಸುಗಮಗೊಳಿಸಿತು. ಪಂದ್ಯವು ಡ್ರಾದತ್ತ ಸಾಗಿತ್ತು. ಆದರೆ 89ನೇ ನಿಮಿಷದಲ್ಲಿ ಮಿಂಚಿನ ವೇಗದಲ್ಲಿ ಗೋಲು ಗಳಿಸಿ ಜಪಾನ್‌ಗೆ ಮುನ್ನಡೆ ಗಳಿಸಿಕೊಟ್ಟರು. ಇಂಜುರಿ ಅವಧಿಯಲ್ಲಿ ಅವರಿಂದ ಮತ್ತೊಂದು ಗೋಲು ಮೂಡಿಬಂತು. ಈ ಜಯದೊಂದಿಗೆ ತಂಡ ಏಷ್ಯಾದ ಅರ್ಹತಾ ಹಂತದ ‘ಬಿ’ ಗುಂಪಿನಲ್ಲಿ 21 ಪಾಯಿಂಟ್ ಕಲೆ ಹಾಕಿತು. ಸೌದಿ ಅರೆಬಿಯಾ ಬಳಿ19 ಪಾಯಿಂಟ್‌ಗಳಿವೆ. ಜಪಾನ್ ಆರನೇ ಬಾರಿ ಮುಖ್ಯ ಸುತ್ತು ತಲುಪಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.