ಫುಟ್‌ಬಾಲ್‌ ವಿಶ್ವಕಪ್‌ಗೆ ಕೆನಡಾ ಅರ್ಹತೆ ಟೊರಾಂಟೊ: ಕೈಲ್‌ ಲಾರಿನ್‌, ಟಾಜೊನ್‌ ಬುಚನನ್‌ ಮತ್ತು ಜೂನಿಯರ್ ಹೊಯಿಲೆಟ್‌ ಗಳಿಸಿದ ಗೋಲುಗಳ ನೆರವಿನಿಂದ ಕೆನಡಾ ತಂಡವು 36 ವರ್ಷಗಳ ಬಳಿಕ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಗೆ ಅರ್ಹತೆ ಗಳಿಸಿತು. ಸೋಮವಾರ ನಡೆದ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಕೆನಡಾ 4–0ಯಿಂದ ಜಮೈಕಾ ತಂಡಕ್ಕೆ ಸೋಲುಣಿಸಿತು. ವಿಜೇತ ತಂಡದ ಪರ 13ನೇ ನಿಮಿಷದಲ್ಲಿ ಕೈಲ್‌ ಲಾರಿನ್‌ ಮೊದಲ ಗೋಲು ಗಳಿಸಿಕೊಟ್ಟರು. ಬುಚನನ್‌ (44ನೇ ನಿಮಿಷ), ಹೊಯಿಲೆಟ್‌ (82ನೇ ನಿಮಿಷ) ಕಾಲ್ಚಳಕ ತೋರಿದರು. ಎದುರಾಳಿ ತಂಡದ ಆ್ಯಡ್ರಿಯನ್ ಮಾರಿಯಪ್ಪ 88ನೇ ನಿಮಿಷದಲ್ಲಿ ಕೆನಡಾಗೆ ‘ಉಡುಗೊರೆ‘ ಗೋಲು ನೀಡಿದರು. 1986ರಲ್ಲಿ ಕೆನಡಾ ತಂಡವು ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಿತ್ತು. ಕಳೆದ ವಾರ ಕತಾರ್‌ನಲ್ಲಿ ನಡೆದ ಪಂದ್ಯದಲ್ಲಿ ಕೋಸ್ಟರಿಕಾ ಎದುರು 0–1ರಿಂದಕೆನಡಾ ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.