ಫುಟ್‌ಬಾಲ್‌: ಈಜಿಪ್ಟ್‌, ಜೋರ್ಡಾನ್‌ ವಿರುದ್ಧ ಆಡಲಿರುವ ಭಾರತ ಮಹಿಳಾ ತಂಡ ನವದೆಹಲಿ: ಭಾರತ ಮಹಿಳಾ ಫುಟ್‌ಬಾಲ್ ತಂಡವು ಏಪ್ರಿಲ್‌ನಲ್ಲಿ ಈಜಿಪ್ಟ್‌ ಮತ್ತು ಜೋರ್ಡಾನ್ ವಿರುದ್ಧದ ಸ್ನೇಹಪರ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಸೋಮವಾರ ಈ ವಿಷಯ ತಿಳಿಸಿದೆ. ಏಪ್ರಿಲ್ 5ರಂದು ಜೋರ್ಡಾನ್ ಮತ್ತು 8ರಂದು ಈಜಿಪ್ಟ್ ವಿರುದ್ಧ ಭಾರತ ಆಡಲಿದೆ. 30 ಸದಸ್ಯರ ತಂಡದ ತರಬೇತಿ ಶಿಬಿರವು ಸೋಮವಾರ ಗೋವಾದಲ್ಲಿ ಆರಂಭವಾಗಿದೆ. ಈ ಪಂದ್ಯಗಳ ಬಳಿಕ ತಂಡದ ಆಟಗಾರ್ತಿಯರು ಇಂಡಿಯನ್‌ ವಿಮೆನ್ಸ್‌ ಲೀಗ್‌ನಲ್ಲಿ ಆಡಲು ತಮ್ಮ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. ಭಾರತ ತಂಡ ಇಂತಿದೆ:ಗೋಲ್‌ಕೀಪರ್ಸ್‌: ಅದಿತಿ ಚೌಹಾಣ್, ಲಿಂತೋಂಗಂಬಿ ದೇವಿ, ಶ್ರೇಯಾ ಹೂಡಾ, ಸೌಮ್ಯಾ ನಾರಾಯಣಸ್ವಾಮಿ. ಡಿಫೆಂಡರ್ಸ್: ದಲಿಮಾ ಚಿಬ್ಬರ್, ಸ್ವೀಟಿ ದೇವಿ, ರಿತು ರಾಣಿ, ಆಶಾಲತಾ ದೇವಿ, ರಂಜನಾ ಚಾನು, ಮನೀಶಾ ಪನ್ನಾ, ಅಸ್ತಮ್ ಓರಾನ್, ಕೃತಿನಾ ದೇವಿ. ಮಿಡ್‌ಫೀಲ್ಡರ್ಸ್: ಅಂಜು ತಮಾಂಗ್, ಸಂಧ್ಯಾ ರಂಗನಾಥನ್, ಕಾರ್ತಿಕಾ ಅಂಗಮುತ್ತು, ರತನ್‌ಬಾಲಾ ದೇವಿ, ಪ್ರಿಯಾಂಕಾ ದೇವಿ, ಕಾಶ್ಮೀನಾ, ಇಂದುಮತಿ ಕದಿರೇಸನ್, ಸಂಜು, ಮಾರ್ಟಿನಾ ತೊಕ್ಚೋಮ್, ಸುಮಿತ್ರಾ ಕಾಮರಾಜ್. ಫಾರ್ವರ್ಡ್ಸ್: ಅಪೂರ್ಣಾ ನಾರ್ಜರಿ, ಗ್ರೇಸ್ ಡ್ಯಾಂಗ್‌ಮೇ, ಸೌಮ್ಯಾ ಗುಗುಲೋತ್, ಮನೀಶಾ, ಪ್ಯಾರಿ ಕ್ಸಾಕ್ಸಾ, ರೇಣು, ಕರಿಷ್ಮಾ ಶಿರ್ವೋಯ್ಕರ್, ಮರಿಯಮ್ಮಲ್‌ ಬಾಲಮುರುಗನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.