ಮ್ಯಾಂಚೆಸ್ಟರ್‌ ಯುನೈಟೆಡ್‌ಗೆ ಎವರ್ಟನ್ ಆಘಾತ ಲಂಡನ್: ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸುವ ನಾಗಾಲೋಟದಲ್ಲಿರುವ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಆಘಾತ ನೀಡಿದ ಎವರ್ಟನ್ ತಂಡ ಪ್ರೀಮಿಯರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಅಮೋಘ ಜಯ ಸಾಧಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಆ್ಯಂಟನಿ ಗಾ‌ರ್ಡಾನ್ (27ನೇ ನಿಮಿಷ) ಗಳಿಸಿದ ಏಕೈಕ ಗೋಲಿನ ಬಲದಿಂದ ಎವರ್ಟನ್ 1–0ಯಿಂದ ಜಯ ಗಳಿಸಿತು. ಮತ್ತೊಂದು ಪಂದ್ಯದಲ್ಲಿ ಚೆಲ್ಸಿ 6–0ಯಿಂದ ಸೌತಾಂಪ್ಟನ್ ಎದುರು ಗೆಲುವು ಸಾಧಿಸಿತು. 8ನೇ ನಿಮಿಷದಲ್ಲಿ ಮಾರ್ಕೋಸ್ ಅಲೊನ್ಸೊ ಗಳಿಸಿದ ಗೋಲಿನ ಮೂಲಕ ಚೆಲ್ಸಿ ಮುನ್ನಡೆ ಗಳಿಸಿತ್ತು. ಮೇಸನ್ ಮೌಂಟ್ (16, 54ನೇ ನಿ) ಮತ್ತು ಟಿನೊ ವಾರ್ನರ್ (21, 49ನೇ ನಿ) ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿದರು. ಕಾಯ್ ಹವೆಟ್ಸ್‌ 31ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.