ಫಿಫಾ ಮಹಿಳಾ ಜೂನಿಯರ್ ವಿಶ್ವಕಪ್‌: ಜೂನ್ 24ರಂದು ಡ್ರಾ ಮುಂಬೈ:ಭಾರತದಲ್ಲಿ ಈ ವರ್ಷ ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಫಿಫಾ17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಟೂರ್ನಿಯ ಡ್ರಾ ಜೂನ್ 24ರಂದು ಜೂರಿಚ್‌ನಲ್ಲಿ ನಡೆಯಲಿದೆ. ಭುವನೇಶ್ವರದ ಕಳಿಂಗ, ಗೋವಾದ ಪಂಡಿತ್ ಜವಾಹರಲಾಲ್ ನೆಹರೂ ಕ್ರೀಡಾಂಗಣ ಮತ್ತು ನವಿ ಮುಂಬೈನ ಡಿ.ವೈ.ಪಾಟೀಲ ಕ್ರೀಡಾಂಗಣಗಳಲ್ಲಿ ಅಕ್ಟೋಬರ್‌ 11ರಿಂದ 30ರವರೆಗೆ ಪಂದ್ಯಗಳು ನಡೆಯಲಿವೆ. ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020ರ ಆವೃತ್ತಿಯನ್ನು ರದ್ದುಗೊಳಿಸಲಾಗಿತ್ತು. ಈಗ ಫಿಫಾ, ಸ್ಥಳೀಯ ಆಯೋಜನಾ ಸಮಿತಿ (ಎಲ್‌ಒಸಿ) ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಟೂರ್ನಿ ನಡೆಯುವ ತಾಣಗಳನ್ನು ಅಂತಿಮಗೊಳಿಸಿವೆ. ಆತಿಥೇಯ ಭಾರತ ಹೊರತುಪಡಿಸಿ ಬ್ರೆಜಿಲ್‌, ಚಿಲಿ, ಕೊಲಂಬಿಯಾ, ಜಪಾನ್‌ ಮತ್ತು ನ್ಯೂಜಿಲೆಂಡ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ. ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.