ನ.20ರಿಂದ ಫಿಫಾ ವಿಶ್ವಕಪ್ ಜೂರಿಚ್: ದೋಹಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಆರಂಭವನ್ನು ಒಂದು ದಿನ ಮುಂದೂಡಲಾಗಿದೆ. ಇದರಿಂದಾಗಿ ಟೂರ್ನಿಯು ನವೆಂಬರ್ 20ರಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಕತಾರ್ ಹಾಗೂ ಇಕ್ವೆಡಾರ್ ತಂಡಗಳು ಮುಖಾಮುಖಿಯಾಗಲಿವೆ. ಫಿಫಾ ಈ ನಿರ್ಧಾರವನ್ನು ಗುರುವಾರ ಕೈಗೊಂಡಿತು. ಕತಾರ್‌ ದೇಶದವರಿಗಾಗಿ ಭಾನುವಾರದ ಸಂಜೆಯೊಂದನ್ನು ಮೀಸಲಿಡಲು ಈ ತೀರ್ಮಾನ ಮಾಡಲಾಗಿದೆ. ಏಳು ವರ್ಷಗಳ ಹಿಂದೆ ಟೂರ್ನಿಯ ಆಯೋಜನೆಯನ್ನು ಮಂಜೂರು ಮಾಡಿದಾಗ ಜೂನ್‌–ಜುಲೈನಲ್ಲಿ ಟೂರ್ನಿ ನಡೆಸುವ ವೇಳಾಪಟ್ಟಿ ಇತ್ತು. ಆದರೆ, ಈ ಎರಡೂ ತಿಂಗಳುಗಲ್ಲಿ ಕತಾರ್‌ನಲ್ಲಿ ಬೇಸಿಗೆ ಬೇಗೆ ತಾರಕಕ್ಕೇರಿರುತ್ತದೆ. ಆದ್ದರಿಂದ ನವೆಂಬರ್‌ –ಡಿಸೆಂಬರ್‌ಗೆ ಮುಂದೂಡಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.