ಫುಟ್‌ಬಾಲ್‌: ಲೆಜೆಂಡ್ಸ್ ಡಿ ಸ್ಪೊರ್ಟಿಂಗ್‌ಗೆ ಪ್ರಶಸ್ತಿ ಬೆಂಗಳೂರು: ಲೆಜೆಂಡ್ಸ್ ಡಿ ಸ್ಪೋರ್ಟಿಂಗ್ ತಂಡವು ಕೆಎಸ್‌ಎಫ್‌ಎ ಬಿ ಡಿವಿಷನ್‌ ಮಹಿಳಾ ಫುಟ್‌ಬಾಲ್ ಲೀಗ್‌ನಲ್ಲಿ ಪ್ರಶಸ್ತಿ ಜಯಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಲೆಜೆಂಡ್ಸ್ 1–0ಯಿಂದ ಯಂಗ್‌ಸ್ಟಾರ್ಸ್ ತಂಡಕ್ಕೆ ಸೋಲುಣಿಸಿತು. ವಿಜೇತ ತಂಡದ ಸಂಧ್ಯಾ (17ನೇ ನಿಮಿಷ) ಗೋಲು ಗಳಿಸಿದರು. ಯಂಗ್‌ಸ್ಟಾರ್ಸ್‌ ರನ್ನರ್‌ಅಪ್ ಸ್ಥಾನ ಗಳಿಸಿತು. ಇನ್ನೊಂದು ಪಂದ್ಯದಲ್ಲಿ ಟೆಕ್ನಿಕೊ ಫುಟ್‌ಬಾಲ್ ಫೌಂಡೇಷನ್ (ಟಿಎಫ್‌ಎಫ್‌) 2–0ಯಿಂದ ಜಿಆರ್‌ಕೆ ಗ್ಲಿಟರಿಂಗ್‌ ಎದುರು ಗೆದ್ದಿತು. ಟಿಎಫ್‌ಎಫ್‌ ಪರ ಜೆಮಿರಾಹ್ ನೇತ್ರಾವತಿ ಶರ್ಮಾ (3ನೇ ನಿಮಿಷ) ಮತ್ತು ಆತ್ಮಿಕಾ ರಾಜೇಂದ್ರ (31ನೇ ನಿ.) ಗೋಲು ದಾಖಲಿಸಿದರು. ಯಂಗ್‌ಸ್ಟಾರ್‌ನ ಎಂಜೆಲ್ ಮರಿಯಾ ಶ್ರೇಷ್ಠ ಗೋಲ್‌ಕೀಪರ್‌, ಸಾರಾ ಮುಕುಂದನ್‌ ಶ್ರೇಷ್ಠ ಡಿಫೆಂಡರ್‌ ಶ್ರೇಯ ಗಳಿಸಿದರು. ಲೆಜೆಂಡ್ಸ್ ತಂಡದ ಅಭಿರಾಮ್ ವಡಿವೇಲ್‌ (18) ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.