ಫುಟ್‌ಬಾಲ್‌: ಸೇಂಟ್‌ ಜೋಸೆಫ್‌ಗೆ ಗೆಲುವು ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಸೇಂಟ್‌ ಜೋಸೆಫ್‌ ಬಾಲಕರ ಹೈಸ್ಕೂಲ್‌ ತಂಡ, ಸುಬ್ರತೊ ಕಪ್‌ ಫುಟ್‌ಬಾಲ್‌ ವಲಯಮಟ್ಟದ ಅರ್ಹತಾ ಟೂರ್ನಿಯಲ್ಲಿ ಸುಲಭ ಜಯ ಸಾಧಿಸಿತು. ಕೆಎಸ್‌ಎಫ್‌ಎ ಸಹಯೋಗದಲ್ಲಿ ಸೇಂಟ್‌ ಜೋಸೆಫ್‌ ಹೈಸ್ಕೂಲ್‌ ಆಯೋಜಿಸಿದ ಟೂರ್ನಿಯಲ್ಲಿ ಗುರುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಸೇಂಟ್‌ ಜೋಸೆಫ್‌ 4–0 ಗೋಲುಗಳಿಂದ ಮಾರತಹಳ್ಳಿಯ ವಿಬ್ಗಯೊರ್‌ ಹೈಸ್ಕೂಲ್‌ ತಂಡವನ್ನು ಮಣಿಸಿತು. ತಲಾ ಎರಡು ಗೋಲುಗಳನ್ನು ಗಳಿಸಿದ ಕನಿಕಾ ಅನಿಲ್‌ (2 ಮತ್ತು 27ನೇ ನಿ.) ಹಾಗೂ ಅಜಯ್‌ ಅರ್ಜುನ್‌ (9 ಮತ್ತು 29) ತಂಡದ ಗೆಲುವಿಗೆ ಕಾರಣರಾದರು. ‘ಡಿ’ ಗುಂಪಿನ ಪಂದ್ಯದಲ್ಲಿ ನ್ಯೂ ಶಮ್ಸ್‌ ಸ್ಕೂಲ್ 3–0 ರಲ್ಲಿ ಶಿಶುಗೃಹ ಸ್ಕೂಲ್‌ ವಿರುದ್ಧ ಜಯ ಪಡೆಯಿತು. ಮದನಿ (13), ಅಫ್ಹಾಮ್‌ ಮುಸ್ಬಾ (29, 30) ವಿಜಯಿ ತಂಡದ ಪರ ಗೋಲು ಗಳಿಸಿದರು. ’ಸಿ‘ ಗುಂಪಿನಲ್ಲಿ ಬಿಷಪ್‌ ಕಾಟನ್‌ ಬಾಲಕರ ಹೈಸ್ಕೂಲ್‌ ತಂಡ 5–1 ರಲ್ಲಿ ರಯಾನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ತಂಡವನ್ನು ಸೋಲಿಸಿತು. ಎನ್‌.ತೇಜಸ್‌ (10), ಅಶ್ವಿನ್‌ ಸುನಿಲ್ (16, 31) ಹಾಗೂ ವಿಜಯ್‌ (45, 50) ಅವರು ಬಿಷಪ್‌ ಕಾಟನ್‌ ಗೆಲುವಿಗೆ ಕಾರಣರಾದರು. ‘ಬಿ’ ಗುಂಪಿನ ಹಣಾಹಣಿಯಲ್ಲಿ ಗ್ರೀನ್‌ವುಡ್‌ ಹೈಸ್ಕೂಲ್ 5–3 ರಲ್ಲಿ ಬಾಲ್ಡ್‌ವಿನ್‌ ಬಾಯ್ಸ್‌ ಹೈಸ್ಕೂಲ್‌ ವಿರುದ್ಧ ಜಯ ಸಾಧಿಸಿತು. ಗ್ರೀನ್‌ವುಡ್‌ ಪರ ಸಿದ್ದಾರ್ಥ್‌ ಜಯಂತ್ (3, 52), ಆರುಷ್‌ ಪಾಠಕ್ (5), ಆದರ್ಶ್‌ ಅಬೆ (10, 30) ಹಾಗೂ ಬಾಲ್ಡ್‌ವಿನ್‌ ಪರ ವೈ.ರೋಹಿತ್ (24) ಮತ್ತು ಎಸ್‌.ಆರುಷ್ (25, 40) ಅವರು ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.