ಅಂತರಜಿಲ್ಲಾ ಫುಟ್‌ಬಾಲ್‌: ದಕ್ಷಿಣ ಕನ್ನಡ ತಂಡಕ್ಕೆ ಪ್ರಶಸ್ತಿ ಬೆಂಗಳೂರು: ದಕ್ಷಿಣ ಕನ್ನಡ ತಂಡವು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಆಯೋಜಿಸಿದ್ದ ಅಂತರಜಿಲ್ಲಾ ಫುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಕನ್ನಡ 2–0ಯಿಂದ ಕೋಲಾರ ತಂಡಕ್ಕೆ ಸೋಲುಣಿಸಿತು. ವಿಜೇತ ತಂಡದ ಪರ ಐದನೇ ನಿಮಿಷದಲ್ಲೇ ಕಾಲ್ಚಳಕ ತೋರಿದ ಮೊಹಮ್ಮದ್ ಹಸನ್‌ ಮುನ್ನಡೆ ತಂದುಕೊಟ್ಟರು. 15ನೇ ನಿಮಿಷದಲ್ಲಿ ಫರಾಜ್ ಅಹಮ್ಮದ್‌ ಗೋಲು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.