ಡುರಾಂಡ್‌ ಕಪ್‌: ಆರ್ಮಿ ರೆಡ್‌ಗೆ ಮಣಿದ ಹೈದರಾಬಾದ್‌ ಇಂಫಾಲ್‌: ಆರ್ಮಿ ರೆಡ್ ತಂಡವು ಡುರಾಂಡ್‌ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಚಾಂಪಿಯನ್‌ ಹೈದರಾಬಾದ್‌ ಎಫ್‌ಸಿಗೆ ಆಘಾತ ನೀಡಿತು. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ 1–0ಯಿಂದ ಗೆದ್ದ ಆರ್ಮಿ ರೆಡ್‌, ಟೂರ್ನಿಯಲ್ಲಿ ತನ್ನ ಅಭಿಯಾನ ಕೊನೆಗೊಳಿಸಿತು. ಹೈದರಾಬಾದ್‌ ಈಗಾಗಲೇ ಕ್ವಾರ್ಟರ್‌ಫೈನಲ್ ತಲುಪಿದೆ. ಪಂದ್ಯದಲ್ಲಿ ಆರ್ಮಿ ರೆಡ್‌ ಪರ ಸುರೇಶ್ ಎಂ. 33ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.