ಫುಟ್‌ಬಾಲ್: ಜೊರ್ಡಾನ್ ಹ್ಯಾಟ್ರಿಕ್‌ ಗೋಲು ಬೆಂಗಳೂರು: ಜೋರ್ಡಾನ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬಿಯು ಸೆವೆಂಟಿನ್ಸ್ ಎಫ್‌ಎ ತಂಡವು ಕೆಎಸ್‌ಎಫ್‌ಎ ಯೂತ್ ಪ್ರೀಮಿಯರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 11 ವರ್ಷದೊಳಗಿನವರ ವಿಭಾಗದ 7 ಎ ಸೈಡ್‌ ಪಂದ್ಯದಲ್ಲಿ ಬಿಯು 6–1ರಿಂದ ಎಫ್‌ಸಿ ಬೆಂಗಳೂರು ಯುನೈಟೆಡ್‌ (ಎಫ್‌ಸಿಬಿಯು) ಎದುರು ಗೆದ್ದಿತು. ಜೋರ್ಡಾನ್‌ 16, 23 ಮತ್ತು 30ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಲೋಲಿತ್‌ (21, 37ನೇ ನಿ.) ಮತ್ತು ಕ್ಸಿನ್ ಜಾನ್‌ (42ನೇ ನಿ.) ವಿಜೇತ ತಂಡದ ಪರ ಗೋಲು ಹೊಡೆದರು. ಎಫ್‌ಸಿಬಿಯು ತಂಡಕ್ಕಾಗಿ ಸಮೀರ್ ಜಾಗೀರ್‌ದಾರ (9ನೇ ನಿ.) ಒಂದು ಗೋಲು ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ಸ್ಪೋರ್ಟ್ಸ್ ಹುಡ್‌ 3–2ರಿಂದ ವಿಕಿ ಎಫ್‌ಎ ಎದುರು ಗೆದ್ದಿತು. 18 ವರ್ಷದೊಳಗಿನವರ ವಿಭಾಗದ 11 ಎ ಸೈಡ್‌ ಪಂದ್ಯಗಳಲ್ಲಿ ಬಿವೈಎಫ್‌ಎಲ್‌ 1–0ಯಿಂದ ನಾರ್ತ್‌ಈಸ್ಟ್ ಯೂತ್ ಎಫ್‌ಸಿ ವಿರುದ್ಧ, ದ ಸ್ಪೋರ್ಟ್ಸ್ ಸ್ಕೂಲ್‌ 2–1ರಿಂದ ಸ್ಟೇಡಿಯಂ ಎಫ್‌ಸಿ ಎದುರು ಜಯ ಸಾಧಿಸಿದವು.ಸ್ನಿಪ್ಪರ್ಸ್ ಎಫ್‌ಸಿ 1–1ರಿಂದ ಬೆಂಗಳೂರು ಚಾಂಪ್ಸ್ ತಂಡದೊಂದಿಗೆ ಡ್ರಾ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.