ಫುಟ್‌ಬಾಲ್‌: ಸಿಮ್ರನ್‌ ಮಿಂಚು ಬೆಂಗಳೂರು: ಸಿಮ್ರನ್‌ ಗುರುಂಗ್‌ ಗಳಿಸಿದ ಐದು ಗೋಲುಗಳ ಬಲದಿಂದ ಮಿಸಾಕಾ ಯುನೈಟೆಡ್‌ ಎಫ್‌ಸಿ ತಂಡವು ಕರ್ನಾಟಕ ವಿಮೆನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ದಾಖಲಿಸಿತು. ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಮಿಸಾಕಾ 9–0ಯಿಂದ ರೆಬೆಲ್ಸ್ ವಿಮೆನ್ಸ್ ಎಫ್‌ಸಿ ಎದುರು ಗೆದ್ದಿತು. ಸಿಮ್ರನ್‌ 11, 17, 33, 34 ಮತ್ತು 45ನೇ ನಿಮಿಷಗಳಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ವಿಜೇತ ತಂಡದ ಪರ ನಿಸಿಲಿಯಾ ಮಜಾವ್‌ (22, 68ನೇ ನಿಮಿಷ), ತನ್ವಿ ಹನ್ಸ್ (52ನೇ ನಿ.), ಲಿಟನ್ ಜಾಮ್ ರಿಕ್ಮಾ ದೇವಿ (89ನೇ ನಿ.) ಗೋಲು ದಾಖಲಿಸಿದರು. ಸೋಮವಾರ ನಡೆಯುವ ಪಂದ್ಯಗಳಲ್ಲಿ ಪರಿಕ್ರಮ ಎಫ್‌ಸಿ– ಕಿಕ್‌ ಸ್ಟಾರ್ಟ್‌ ಎಫ್‌ಸಿ, ರೂಟ್ಸ್ –ಮಾ ಡರ್ನ್ ಗರ್ಲ್ಸ್, ಕೆಂಪ್‌– ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗುವವು. ಪಂದ್ಯ ಡ್ರಾ: ಬಿಡಿಫ್‌ಎ ಪುರುಷರ ಸೂಪರ್ ಡಿವಿಷನ್‌ ಲೀಗ್‌ನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌– ಎಂಇಜಿ ಆಂಡ್‌ ಸೆಂಟರ್‌ ಎಫ್‌ಸಿ ನಡುವಣ ಪಂದ್ಯ ಗೋಲುರಹಿತವಾಗಿ ಡ್ರಾ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.