2022 : ಫಿಫಾ ವಿಶ್ವಕಪ್‌ ಅಂಕಿ ಅಂಶ 18 ಕ್ಯಾರಟ್‌ ಚಿನ್ನದಿಂದ ತಯಾರಾಗಿರುವ ವಿಶ್ವಕಪ್ ಟ್ರೋಫಿಯು 36.8 ಸೆ.ಮೀ. ಎತ್ತರವಿದೆ. 6.14 ಕೆಜಿ ತೂಕವಿದೆ. ಈ ಬಾರಿಯ ಟ್ರೋಫಿಗಾಗಿ ಏಳು ದೇಶಗಳ ಪರಿಣತರು 53 ಮಾದರಿಗಳನ್ನು ಸಿದ್ಧಪಡಿಸಿದ್ದರು. ವಿಶ್ವಕಪ್ ಟ್ರೋಫಿ ವಿಶೇಷವೇನು? 18 ಕ್ಯಾರಟ್‌ ಚಿನ್ನದಿಂದ ತಯಾರಾಗಿರುವ ವಿಶ್ವಕಪ್ ಟ್ರೋಫಿಯು 36.8 ಸೆ.ಮೀ. ಎತ್ತರವಿದೆ. 6.14 ಕೆಜಿ ತೂಕವಿದೆ. ಈ ಬಾರಿಯ ಟ್ರೋಫಿಗಾಗಿ ಏಳು ದೇಶಗಳ ಪರಿಣತರು 53 ಮಾದರಿಗಳನ್ನು ಸಿದ್ಧಪಡಿಸಿದ್ದರು. ಅಂತಿಮವಾಗಿ ಇಟಲಿಯ ಸಿಲ್ವಿಯೊ ಗ್ಯಾಜನಿಗಾ ಅವರು ಸಿದ್ಧಪಡಿಸಿದ ವಿನ್ಯಾಸವನ್ನು ಆಯ್ಕೆ ಮಾಡಲಾಯಿತು. ಫಿಫಾ ವಿಶ್ವಕಪ್ ಸಂಸ್ಥಾಪ‍ಕಜೂಲ್ಸ್ ರಿಮೆಟ್ ಗೌರವಾರ್ಥ, 1930ರಲ್ಲಿ ವಿನ್ಯಾಸಗೊಳಿಸಲಾದ ಮೊದಲ ಟ್ರೋಫಿಗೆ ಅವರ ಹೆಸರನ್ನೇ ಇಡಲಾಗಿತ್ತು.ಫ್ರೆಂಚ್ ಶಿಲ್ಪಿ ಅಬೆಲ್ ಲಾಫ್ಲೂರ್ಈ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದರು. 1974ರಿಂದ ಫಿಫಾ ವಿಶ್ವಕಪ್ ಟ್ರೋಫಿ ಎಂದು ಬದಲಾಯಿಸಲಾಯಿತು. ಇಬ್ಬರು ವ್ಯಕ್ತಿಗಳು ಭೂಮಿಯ ಮಾದರಿಯನ್ನು ಹೊತ್ತುಕೊಂಡಿರುವ ಚಿತ್ರ ಟ್ರೋಫಿಯ ಮೇಲಿದೆ. ವಿಶ್ವಕಪ್‌ನ ಮೂಲ ಟ್ರೋಫಿಯನ್ನು ವಿಜೇತರಿಗೆ ನೀಡುವುದಿಲ್ಲ. ಹೊಸ ನಿಯಮಗಳ ಅನ್ವಯ ಅದು ಫಿಫಾದ ಬಳಿಯೇ ಉಳಿಯುತ್ತದೆ. ಬದಲಾಗಿ ಟೂರ್ನಿ ವಿಜೇತರಿಗೆ ಟ್ರೋಫಿಯ ಚಿನ್ನಲೇಪಿತ ಪ್ರತಿಕೃತಿಯನ್ನು ನೀಡಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.