ಫಿಫಾ ಮಹಿಳೆಯರ ವಿಶ್ವಕಪ್‌: ಸ್ಪೇನ್‌ಗೆ ಕಿರೀಟ ನವಿ ಮುಂಬೈ (ಪಿಟಿಐ): ಹಾಲಿ ಚಾಂಪಿಯನ್‌ ಸ್ಪೇನ್‌ ತಂಡ ಫಿಫಾ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡಿತು. ಭಾನುವಾರ ನಡೆದ ಫೈನಲ್‌ನಲ್ಲಿ ಸ್ಪೇನ್‌ 1-0 ಗೋಲಿನಿಂದ ಕೊಲಂಬಿಯಾ ತಂಡವನ್ನು ಮಣಿಸಿತು. ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದ ಕೊಲಂಬಿಯಾ ತಂಡ, ಎದುರಾಳಿಗಳಿಗೆ ‘ಉಡುಗೊರೆ’ ಗೋಲು ನೀಡಿ ನಿರಾಸೆ ಅನುಭವಿಸಿತು. ಪಂದ್ಯದ 82ನೇ ನಿಮಿಷದಲ್ಲಿ ಕೊಲಂಬಿಯದ ಡಿಫೆಂಡರ್‌ ಅನಾ ಮರಿಯಾ ಗಜ್ಮನ್‌ ಅವರು ಎದುರಾಳಿ ಆಟಗಾರ್ತಿಯ ಗೋಲು ಗಳಿಸುವ ಪ್ರಯತ್ನವನ್ನು ತಡೆಯುವಲ್ಲಿ ಎಡವಿ ಚೆಂಡನ್ನು ತಮ್ಮದೇ ಗೋಲುಪೆಟ್ಟಿಗೆಯೊಳಗೆ ಕಳುಹಿಸಿದರು. 2018 ರಲ್ಲಿ ನಡೆದಿದ್ದ ಟೂರ್ನಿಯಲ್ಲೂ ಸ್ಪೇನ್‌ ಚಾಂಪಿಯನ್‌ ಆಗಿತ್ತು. ಮೂರನೇ ಸ್ಥಾನವನ್ನು ನಿರ್ಣಯಿಸಲು ನಡೆದ ಪಂದ್ಯದಲ್ಲಿ ನೈಜೀರಿಯಾ 3–2 ಗೋಲುಗಳಿಂದ ಜರ್ಮನಿ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.