ಫುಟ್‌ಬಾಲ್‌: ರೆಬೆಲ್ಸ್‌ಗೆ ಗೆಲುವು ಬೆಂಗಳೂರು: ಉತ್ತಮ ಆಟವಾಡಿದ ರೆಬೆಲ್ಸ್ ಎಫ್‌ಸಿ ಆಟಗಾರರು ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಗೆಲುವು ಸಾಧಿಸಿದರು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರೆಬೆಲ್ಸ್ 3–0ಯಿಂದ ಎಎಸ್‌ಸಿ ಸೆಂಟರ್ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡಕ್ಕಾಗಿ ಸಂದೀಪ್ ಲಿಂಬಾ (51ನೇ ನಿ.), ಅರ್ನೆಸ್ಟ್ ಅಡ್ಡೊ (71ನೇ ನಿ.) ಮತ್ತು ಸಂಜೀವ್ ಸಿಂಗ್‌ (85ನೇ ನಿ.) ಗೋಲು ಹೊಡೆದರು. ಇನ್ನುಳಿದ ಪಂದ್ಯಗಳಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ 3–1ರಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎದುರು, ಬಿಯುಎಫ್‌ಸಿ 1–0ಯಿಂದ ಯಂಗ್ ಚಾಲೆಂಜರ್ಸ್ ಎದುರು ಜಯ ಸಾಧಿಸಿದವು. ಮಂಗಳವಾರ ನಡೆಯುವ ಪಂದ್ಯಗಳಲ್ಲಿ ಸ್ಪೋರ್ಟಿಂಗ್‌ ಕ್ಲಬ್ ಬೆಂಗಳೂರು– ಬಿಎಫ್‌ಸಿ, ಕೊಡಗು ಎಫ್‌ಸಿ– ಥಾಂಕೊಸ್ ಸ್ಟೂಡೆಂಟ್ಸ್ ಯೂನಿಯನ್‌, ಬೆಂಗಳೂರು ಇಂಡಿಪೆಂಡೆಂಟ್ಸ್– ಫ್ರೆಂಡ್ಸ್ ಯುನೈಟೆಡ್‌, ಎಡಿಇ ಎಫ್‌ಸಿ– ಅಗ್ನಿಪುತ್ರ ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.