ಐಎಸ್‌ಎಲ್: ಈಸ್ಟ್‌ ಬೆಂಗಾಲ್ ಜಯ ಗುವಾಹಟಿ: ಅಮೋಘ ಆಟವಾಡಿದ ಈಸ್ಟ್ ಬೆಂಗಾಲ್ ತಂಡವು ಇಂಡಿಯನ್ ಗುರುವಾರ ನಡೆದ ಸೂಪರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ನಾರ್ಥ್‌ ಈಸ್ಟ್ ಯುನೈಟೆಡ್ ವಿರುದ್ಧ ಜಯಿಸಿತು. ಕ್ಲೆಟನ್ ಸಿಲ್ವಾ (11ನೇ ನಿ), ಚಾರ್ಲಾಂಬೋಸ್ ಕೈರಿಯಾಕೊವ್ (52ನೇ ನಿ) ಹಾಗೂ ಜೋರ್ಡಾನ್ ಒ ಡೊಹರ್ಟಿ (84 ನಿ) ಅವರ ಉತ್ತಮ ಆಟದಿಂದಾಗಿ ಬೆಂಗಾಲ್ 3–1ರಿಂದ ನಾರ್ಥ್ ಈಸ್ಟ್ ಯುನೈಟೆಡ್‌ಗೆ ಸೋಲುಣಿಸಿತು. ಯುನೈಟೆಡ್‌ ತಂಡದ ಮ್ಯಾಟ್ ಡರ್ಬಿಶೈರ್ (90+2) ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.