ಯೂರೋಪಾ ಲೀಗ್ ಟೂರ್ನಿ: ರೊನಾಲ್ಡೊ ಗೋಲು, ಮ್ಯಾಂಚೆಸ್ಟರ್‌ಗೆ ಗೆಲುವು ವಾಷಿಂಗ್ಟನ್‌: ಪಂದ್ಯದ ಕೊನೆಯ ಹಂತದಲ್ಲಿ ಕಾಲ್ಚಳಕ ತೋರಿದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗೋಲು ಗಳಿಸಿಕೊಟ್ಟರು. ಯೂರೋಪಾ ಲೀಗ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ 3–0ಯಿಂದ ಶೆರಿಫ್ ತಿರಾಸ್ಪೋಲ್ ಎದುರು ಗೆದ್ದಿತು. ಇದರೊಂದಿಗೆ ನಾಕೌಟ್ ಸುತ್ತಿಗೆ ಅರ್ಹತೆ ಗಳಿಸಿತು. ಕಳೆದ ವಾರ ಟೊಟ್ಟೆನ್‌ಹ್ಯಾಮ್‌ ವಿರುದ್ಧ ನಡೆದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಬರಲು ನಿರಾಕರಿಸಿದ್ದರು. ಹೀಗಾಗಿ ಚೆಲ್ಸಿ ಎದುರಿನ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ಆಯ್ಕೆ ಮಾಡಲಾದ ತಂಡದಿಂದ ರೊನಾಲ್ಡೊ ಅವರನ್ನು ಕೈಬಿಡಲಾಗಿತ್ತು. ಈ ಪಂದ್ಯದ 81ನೇ ನಿಮಿಷದಲ್ಲಿ ಪೋರ್ಚುಗಲ್ ಆಟಗಾರ ಗೋಲು ದಾಖಲಿಸಿದರು. ಇದಕ್ಕೂ ಮೊದಲು ಡಿಫೆಂಡರ್ ಡಿಯಗೊ ಡ್ಯಾಲಟ್‌ 44ನೇ ನಿಮಿಷದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಮೊದಲ ಗೋಲು ತಂದಿದ್ದರು. ಮಾರ್ಕಶ್‌ ರ‍್ಯಾಶ್‌ಫೋರ್ಡ್‌ 81ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.