ಬ್ರೆಜಿಲ್‌ಗೆ ಕಪ್‌: ಆಕ್ಸ್‌ಫರ್ಡ್‌ ವಿವಿಯ ಜೋಶುವಾ ಲೆಕ್ಕಾಚಾರ ಬೆಂಗಳೂರು: ಈ ಬಾರಿಯ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ಬ್ರೆಜಿಲ್‌ ಗೆಲ್ಲಲಿದೆಯೇ? ಅಂತಹ ಅಧಿಕ ಸಾಧ್ಯತೆಯಿದೆ ಎಂದು ಆಕ್ಸ್‌ಫರ್ಡ್‌ ಮೆಥಮೆಟಿಕಲ್‌ ಇನ್‌ಸ್ಟಿಟ್ಯೂಟ್‌ನ ಗಣಿತಶಾಸ್ತ್ರಜ್ಞ ಜೋಶುವಾ ಬುಲ್ ಲೆಕ್ಕಾಚಾರ ಮಾಡಿದ್ದಾರೆ. ‘2022ರ ಫಿಫಾ ಟೂರ್ನಿಯ ಗಣಿತ ಮಾದರಿ’ ಎಂಬ ತಲೆಬರಹದಲ್ಲಿ ವಿಶ್ವಕಪ್‌ ಟೂರ್ನಿಯ ಭವಿಷ್ಯ ನುಡಿಯಲಾಗಿದ್ದು, ಆಕ್ಸ್‌ಫರ್ಡ್‌ ವಿ.ವಿ ಟ್ವಿಟರ್‌ ಖಾತೆಯಲ್ಲಿ ಪ್ರಕಟವಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಗಣಿತಶಾಸ್ತ್ರಜ್ಞ ಪ್ರಕಾರ ಬ್ರೆಜಿಲ್‌– ಬೆಲ್ಜಿಯಂ ಫೈನಲ್‌ ನಡೆಯಲಿದ್ದು, ನೇಮರ್‌ ಅವರನ್ನೊಳಗೊಂಡ ಬ್ರೆಜಿಲ್‌ ಕಿರೀಟ ಮುಡಿಗೇರಿಸಲಿದೆ. ಫೈನಲ್‌ನಲ್ಲಿ ಬ್ರೆಜಿಲ್‌ ಗೆಲುವಿನ ಸಾಧ್ಯತೆ ಶೇ 61.3, ಬೆಲ್ಜಿಯಂ ಗೆಲುವಿನ ಸಾಧ್ಯತೆ ಶೇ 38.7 ಎಂದಿದ್ದಾರೆ. ಬ್ರೆಜಿಲ್‌ ಮತ್ತು ಬೆಲ್ಜಿಯಂ ತಂಡಗಳು ಸೆಮಿಫೈನಲ್‌ನಲ್ಲಿ ಕ್ರಮವಾಗಿ ಅರ್ಜೆಂಟೀನಾ ಹಾಗೂ ಫ್ರಾನ್ಸ್‌ ತಂಡಗಳನ್ನು ಸೋಲಿಸಲಿದೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ನೆದರ್ಲೆಂಡ್ಸ್‌, ಸ್ಪೇನ್‌, ಇಂಗ್ಲೆಂಡ್‌ ಮತ್ತು ಪೋರ್ಚುಗಲ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿರುವ ಇತರ ನಾಲ್ಕು ತಂಡಗಳು ಎಂದು ಭವಿಷ್ಯ ಹೇಳಿದ್ದಾರೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.