ಫುಟ್‌ಬಾಲ್: ಕೊಡಗು ಎಫ್‌ಸಿಗೆ ಭರ್ಜರಿ ಜಯ ಬೆಂಗಳೂರು: ಕೊಡಗು ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಸಾಧಿಸಿತು. ಸೋಮವಾರ ನಡೆದ ಪಂದ್ಯದಲ್ಲಿ ಕೊಡಗು 8–0ಯಿಂದ ಎಡಿಇ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಸಿಬಿ 5, 66 ಮತ್ತು 88ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಒಂಗ್ಡಾ ಲೆಪ್ಚಾ (10, 45ನೇ ನಿ.), ಅರುಣ್ ಲಾಲ್ (49, 74ನೇ ನಿ.) ಮತ್ತು ನೋರೆಮ್‌ ಮಿಟೆಯ್‌ (82ನೇ ನಿ.) ಮಿಂಚಿದರು. ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ 4–1ರಿಂದ ಇಂಡಿಪೆಂಡೆಂಟ್ಸ್ ಎದುರು ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.