: ಆಸ್ಟ್ರೇಲಿಯಾ ವಿರುದ್ಧ ಜಯ, ಕ್ವಾರ್ಟರ್ ಫೈನಲ್‌ಗೆ ಮೆಸ್ಸಿ ಬಳಗ ದೋಹಾ: ಸ್ಟಾರ್ ಆಟಗಾರ ಲಯೊನೆಲ್‌ ಮೆಸ್ಸಿ ಅವರು ತಮ್ಮ ವೃತ್ತಿಜೀವನದ 1000ನೇ ಪಂದ್ಯದಲ್ಲಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾನುವಾರ ಅರ್ಜೆಂಟೀನಾ 2-1 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಇದರೊಂದಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿತು. ಅಹಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ಲಯೊನೆಲ್‌ ಮೆಸ್ಸಿ ಮೋಡಿ ಮಾಡಿದರು. 35ನೇ ನಿಮಿಷದಲ್ಲಿ ಮೆಸ್ಸಿ ಮನಮೋಹಕ ಗೋಲು ಬಾರಿಸಿ ಗಮನ ಸೆಳೆದರು. ಇತ್ತ 57ನೇ ನಿಮಿಷದಲ್ಲಿ ಜೂಲಿಯನ್‌ ಅಲ್ವಾರೆಜ್‌ ಮತ್ತೊಂದು ಗೋಲು ತಂದುಕೊಟ್ಟರು. ಈ ಮೂಲಕ ಮೆಸ್ಸಿ ಈ ಟೂರ್ನಿಯಲ್ಲಿ ಗಳಿಸಿದ ಮೂರು ಗೋಲುಗಳು ಸೇರಿದಂತೆ ವಿಶ್ವಕಪ್‌ನಲ್ಲಿ ಒಟ್ಟು ಒಂಬತ್ತು ಸಲ ಚೆಂಡನ್ನು ಗುರಿ ಸೇರಿಸಿದ್ದಾರೆ. #FIFAWorldCup2022 | 9th , 8 . # (: ' ) ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.