ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಗೆಲುವು ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ 6–0 ಗೋಲುಗಳಿಂದ ಬಿಯುಎಫ್‌ಸಿ ತಂಡವನ್ನು ಮಣಿಸಿತು. ಪ್ರಿನ್ಸ್‌ವಿಲ್‌ ಎಮೆಕಾ ಅವರು (35, 59 ಮತ್ತು 77ನೇ ನಿ.) ಮೂರು ಗೋಲುಗಳನ್ನು ಗಳಿಸಿದರೆ, ಪ್ರಶಾಂಕ್‌ ಕಳಿಂಗ (18), ಅಭಿಷೇಕ್‌ ಶಂಕರ್‌ (56) ಹಾಗೂ ನಿಖಿಲ್‌ ರಾಜ್‌ ತಲಾ ಒಂದು ಗೋಲು ತಂದಿತ್ತರು. ರೂಟ್ಸ್‌ ಎಫ್‌ಸಿ ಮತ್ತು ಎಫ್‌ಸಿ ಡೆಕ್ಕನ್‌ ತಂಡಗಳ ನಡುವಿನ ಪಂದ್ಯ 1–1 ಗೋಲಿನ ಡ್ರಾದಲ್ಲಿ ಕೊನೆಗೊಂಡಿತು. ಅನಿರುದ್ಧ್‌ ಮುಕುಂದನ್‌ 59ನೇ ನಿಮಿಷದಲ್ಲಿ ರೂಟ್ಸ್‌ ತಂಡಕ್ಕೆ ಹಾಗೂ ಕೆ.ಕವಿಯರಸನ್‌ 67ನೇ ನಿಮಿಷದಲ್ಲಿ ಡೆಕ್ಕನ್‌ ತಂಡಕ್ಕೂ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.