ಜೆಮ್‌ಶೆಡ್‌ಪುರಕ್ಕೆ ಮಣಿದ ಗೋವಾ ಮಡಗಾಂವ್‌(ಪಿಟಿಐ): ಸೆರ್ಜಿಯೊ ಕ್ಯಾಸೆಲ್‌ ಗಳಿಸಿದ ಗೋಲಿನ ಬಲದಿಂದ ಜೆಮ್‌ಶೆಡ್‌ಪುರ ಎಫ್‌ಸಿ ತಂಡವು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಲೀಗ್‌ ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳಿತು. ಮಂಗಳವಾರ ನಡೆದ ಪಂದ್ಯದಲ್ಲಿ 1–0ಯಿಂದ ಎಫ್‌ಸಿ ಗೋವಾ ತಂಡವನ್ನು ಮಣಿಸಿತು. ಪಂದ್ಯದಲ್ಲಿ ಕ್ಯಾಸೆಲ್‌ ಅವರು 17ನೇ ನಿಮಿಷದಲ್ಲಿ ಗೋಲು ಹೊಡೆದು ಸಂಭ್ರಮಿಸಿದರು. ಇದು ಈ ಋತುವಿನಲ್ಲಿ ಅವರು ಗಳಿಸಿದ ನಾಲ್ಕನೇ ಗೋಲು. ಈ ಗೆಲುವಿನೊಂದಿಗೆ ಜೆಮ್‌ಶೆಡ್‌ಪುರ ತಂಡವು (10 ಪಾಯಿಂಟ್ಸ್) ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಪರಾಜಿತ ಗೋವಾ (8 ಪಾಯಿಂಟ್ಸ್) ನಾಲ್ಕನೇ ಸ್ಥಾನಕ್ಕೆ ಜಾರಿತು. ಇಂದಿನ ಪಂದ್ಯ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ–ಮುಂಬೈ ಸಿಟಿ ಎಫ್‌ಸಿ ಸ್ಥಳ: ಇಂದಿರಾಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣ ಗುವಾಹಟಿ ಪಂದ್ಯ ಆರಂಭ: ಸಂಜೆ 7.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.