ಲಾ ಲಿಗಾ ಫುಟ್‌ಬಾಲ್‌ನಲ್ಲಿ ಆಡಿದ ಬೆಂಗಳೂರಿನ ಮಕ್ಕಳು ಬೆಂಗಳೂರು: ಲಾ ಲಿಗಾ ಫುಟ್‌ಬಾಲ್‌ ಸ್ಕೂಲ್‌ ಮತ್ತು ರಿಯಲ್‌ ಬೆಟಿಸ್‌ ಸಹಯೋಗದಲ್ಲಿ ಶನಿವಾರ ಅಂತರ ಕೇಂದ್ರ ಫುಟ್‌ಬಾಲ್‌ ಟೂರ್ನಿ ನಡೆಯಿತು. 13 ಮತ್ತು 15 ವರ್ಷದೊಳಗಿನವರ ವಿಭಾಗಗಳಲ್ಲಿ ಇಲ್ಲಿನ ಟಿಯೆಂಟೊ ಸ್ಪೋರ್ಟ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಟೂರ್ನಿಯ ಬಳಿಕ ಮಕ್ಕಳು ಡ್ರಿಬ್ಲಿಂಗ್‌ ಸರ್ಕ್ಯೂಟ್ಸ್‌, ಪೆನಾಲ್ಟಿ ಶೂಟೌಟ್ಸ್‌ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.