ರೌನಕ್‌ ಮಿಂಚು: ಕರ್ನಾಟಕಕ್ಕೆ ಜಯ ಬೆಂಗಳೂರು: ರೌನಕ್‌ ಮಹಾಪಾತ್ರ ಗಳಿಸಿದ ಎರಡು ಗೋಲುಗಳ ಬಲದಿಂದ ಕರ್ನಾಟಕ ತಂಡವು ರಾಷ್ಟ್ರೀಯ ಸಬ್‌ಜೂನಿಯರ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಹರಿಯಾಣ ಎದುರು 2–1ರಿಂದ ಜಯ ಸಾಧಿಸಿತು. ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿ ನಡೆದ ಟೂರ್ನಿಯ ಪಂದ್ಯದಲ್ಲಿ ರೌನಕ್‌ 6ನೇ ಹಾಗೂ 38ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಹರಿಯಾಣ ಪರ ಅಮನ್‌ (30ನೇ ನಿಮಿಷ) ಒಂದು ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡ ಮಹಾರಾಷ್ಟ್ರ ಎದುರು 2–0ಯಿಂದ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.