ಸ್ಯಾಫ್‌: ಭಾರತಕ್ಕೆ ಭೂತಾನ್‌ ಸವಾಲು ನವದೆಹಲಿ: ಭಾರತ ಮಹಿಳಾ ತಂಡದವರು ಸ್ಯಾಫ್‌ 20 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯಲ್ಲಿ ಭೂತಾನ್‌ ವಿರುದ್ಧದ ಪಂದ್ಯದೊಂದಿಗೆ ಪ್ರಶಸ್ತಿಯೆಡೆಗಿನ ಅಭಿಯಾನ ಆರಂಭಿಸಲಿದ್ದಾರೆ. ಸ್ಯಾಫ್‌ ಟೂರ್ನಿ ಢಾಕಾದಲ್ಲಿ ಮುಂದಿನ ವರ್ಷ ಫೆ.3 ರಿಂದ 9ರ ವರೆಗೆ ನಡೆಯಲಿದೆ. ಭಾರತ– ಭೂತಾನ್‌ ಪಂದ್ಯ ಫೆ.3 ರಂದು ನಡೆಯಲಿದೆ. ಭಾರತ ತಂಡ ಆ ಬಳಿಕ ಫೆ.5 ರಂದು ಬಾಂಗ್ಲಾದೇಶ ಹಾಗೂ ಫೆ.7 ರಂದು ನೇಪಾಳ ವಿರುದ್ಧ ಪೈಪೋಟಿ ನಡೆಸಲಿದೆ. ಫೆ.9 ರಂದು ಫೈನಲ್ ನಡೆಯಲಿದೆ. ರೌಂಡ್‌ ರಾಬಿನ್‌ ಲೀಗ್‌ ಬಳಿಕ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.