ಬಿಡಿಯು ಎಫ್‌ಸಿಗೆ ಜಯ ಬೆಂಗಳೂರು: ಬೆಂಗಳೂರು ಡ್ರೀಮ್‌ ಯುನೈಟೆಡ್‌ (ಬಿಡಿಯು) ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಹಣಾಹಣಿಯಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿಯನ್ನು 2–1ರಿಂದ ಮಣಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಬಿಡಿಯು ಪರ ಶಫೀಕ್ ತೆಕ್ಕುಂಪಟ್‌ (46ನೇ ನಿಮಿಷ) ಹಾಗೂ ವಿಷ್ಣು (61ನೇ ನಿಮಿಷ) ಗೋಲು ದಾಖಲಿಸಿದರೆ ಇಂಡಿಪೆಂಡೆಂಟ್ಸ್ ಪರ ನರೇಂದ್ರ (90+1ನೇ ನಿಮಿಷ) ಪೆನಾಲ್ಟಿ ಅವಧಿಯಲ್ಲಿ ಯಶಸ್ಸು ಕಂಡರು. ಮತ್ತೊಂದು ಪಂದ್ಯದಲ್ಲಿ ಎಡಿಇ ಎಫ್‌ಸಿ ತಂಡವು ಇನ್‌ಕಮ್‌ ಟ್ಯಾಕ್ಸ್ ಎಫ್‌ಸಿಯೊಂದಿಗೆ 2–2ರ ಡ್ರಾ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.