ಬಾಲಕಿಯರ ಫುಟ್‌ಬಾಲ್ ಟೂರ್ನಿ ಇಂದಿನಿಂದ ಬೆಂಗಳೂರು: ಖೇಲೊ ಇಂಡಿಯಾ ಯೋಜನೆಯಡಿ ನಡೆಯುವ 17 ವರ್ಷದೊಳಗಿನ ಬಾಲಕಿಯರ ಫುಟ್‌ಬಾಲ್ ಟೂರ್ನಿಗೆ ರಾಜ್ಯ ಫುಟ್‌ಬಾಲ್ ಸಂಸ್ಥೆ ಆತಿಥ್ಯ ವಹಿಸಲಿದೆ. ಪಂದ್ಯಗಳು ನಗರದ ಸಾಯ್ ಮೈದಾನದಲ್ಲಿ ಭಾನುವಾರ ಆರಂಭವಾಗಲಿವೆ. ಮೊದಲ ದಿನ ಮಧ್ಯಾಹ್ನ 2 ಗಂಟೆಗೆ ‘ಬಿ’ ಗುಂಪಿನ ಪಂದ್ಯದಲ್ಲಿ ಗ್ರೀನ್‌ವುಡ್ ಎಫ್‌ಸಿ ಮತ್ತು ಬೆಂಗಳೂರು ಬ್ಲೂಸ್ ಎಫ್‌ಸಿ ತಂಡಗಳು ಸೆಣಸಲಿದ್ದು 3.45ಕ್ಕೆ ’ಎ’ ಗುಂಪಿನ ಪಂದ್ಯದಲ್ಲಿ ಜಿಆರ್‌ಕೆ ಗರ್ಲ್ಸ್‌ ಎಫ್‌ಸಿ ಮತ್ತು ಬೆಂಗಳೂರು ಸ್ಟಾರ್ಸ್‌ ಎಫ್‌ಸಿ ನಡುವೆ ಹಣಾಹಣಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.