ಇಂಡಿಪೆಂಡೆಂಟ್ಸ್‌ಗೆ ಗೆಲುವು ಮಂಡ್ಯ: ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ ತಂಡ ಮಂಡ್ಯ ಜಿಲ್ಲಾ ಫುಟ್‌ ಬಾಲ್‌ ಸಂಸ್ಥೆ ಆಶ್ರಯದಲ್ಲಿ ನಡೆ ಯುತ್ತಿರುವ ಮುಖ್ಯಮಂತ್ರಿ ಕಪ್‌ ಅಖಿಲ ಭಾರತ ಫುಟ್‌ಬಾಲ್‌ ಟೂರ್ನಿಯಲ್ಲಿ ಜಯ ಸಾಧಿಸಿತು. ಸರ್‌ ಎಂ.ವಿ. ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್ 3–1 ಗೋಲುಗಳಿಂದ ಸಿಕಂದರಾಬಾದ್‌ನ ಡೆಕ್ಕನ್‌ ಡೈನಾಮೋಸ್‌ ತಂಡವನ್ನು ಮಣಿಸಿತು. ವಿಜಯಿ ತಂಡದ ಪರ ಸತೀಶ್‌ ಕುಮಾರ್‌ (37ನೇ ನಿ.), ಎನ್‌.ಪ್ರಸಾದ್‌ (53ನೇ ನಿ.) ಮತ್ತು ಎಸ್‌.ಅಬ್ದುಲ್‌ ಸತ್ತಾರ್ (87ನೇ ನಿ.) ಗೋಲು ಗಳಿಸಿದರು. ಡೈನಾಮೋಸ್ ತಂಡದ ಏಕೈಕ ಗೋಲನ್ನು ಆರ್.ಹುನೇನ್‌ 38ನೇ ನಿಮಿಷದಲ್ಲಿ ಗಳಿಸಿದರು. ಎಫ್‌ಸಿ ಮಂಗಳೂರು ಮತ್ತು ಎಚ್‌ಎಎಲ್‌ ಸ್ಪೋರ್ಟ್ಸ್‌ ಕ್ಲಬ್‌ ನಡುವಿನ ದಿನದ ಮತ್ತೊಂದು ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತು. ಸೋಮವಾರ ನಡೆಯುವ ಪಂದ್ಯ ಗಳಲ್ಲಿ ಕಿಕ್‌ ಸ್ಟಾರ್ಟ್‌ ಎಫ್‌ಸಿ–ಎಎಸ್‌ಎ ಅನಂತಪುರ ಹಾಗೂ ಕೆಎಸ್‌ಇಬಿ ತಿರುವನಂತಪುರ–ಬೆಂಗಳೂರು ಡ್ರೀಮ್ಸ್‌ ಯುನೈಟೆಡ್‌ ಎಫ್‌ಸಿ ಎದುರಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.