ಬೆಂಗಳೂರಿನಲ್ಲಿ ಮಹಿಳಾ ಫುಟ್‌ಬಾಲ್‌ ಲೀಗ್‌ ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯು (ಕೆಎಸ್‌ಎಫ್‌ಎ) ಬೆಂಗಳೂರಿನಲ್ಲಿ ಜನವರಿ ತಿಂಗಳ ಅಂತ್ಯದಲ್ಲಿ ಹೀರೋ ಇಂಡಿಯನ್‌ ಮಹಿಳಾ ಲೀಗ್‌ (ಐಡಬ್ಲ್ಯುಎಲ್‌) ಫುಟ್‌ಬಾಲ್‌ ಟೂರ್ನಿ ಆಯೋಜಿಸುತ್ತಿದೆ. ನಾಲ್ಕನೇ ಆವೃತ್ತಿಯಐಡಬ್ಲ್ಯುಎಲ್‌ ಟೂರ್ನಿಯು ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು ವಿವಿಧ ರಾಜ್ಯಗಳ ಚಾಂಪಿಯನ್ ಕ್ಲಬ್‌ಗಳು ಹಾಗೂ ಭಾರತ ಇತರರ ತಂಡ ಸೇರಿ ಒಟ್ಟು12 ತಂಡಗಳು ಭಾಗವಹಿಸಲಿವೆ. ಜನವರಿ 24ರಿಂದ ಟೂರ್ನಿ ನಡೆಯುವ ಸಾಧ್ಯತೆಯಿದೆ. ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯುವ ಟೂರ್ನಿಯಲ್ಲಿ 12 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಕೆಎಸ್‌ಎಫ್‌ಎ ಆಯೋಜಿಸಿದ್ದ ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ಚಾಂಪಿಯನ್‌ ಆಗಿದ್ದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ ಟೂರ್ನಿಯಲ್ಲಿ ಕರ್ನಾಟವನ್ನು ಪ್ರತಿನಿಧಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.