ಎಫ್‌ಸಿ ಗೋವಾಗೆ ಹೊಸ ಕೋಚ್ ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುತ್ತಿರುವ ಎಫ್‌ಸಿ ಗೋವಾ ತಂಡವು ಕೋಚ್‌ಗಳನ್ನು ಬದಲಾಯಿಸಿದೆ. ಈ ವರೆಗೆ ಕೋಚ್ ಆಗಿದ್ದ ಸರ್ಜಿಯೊ ಲೊಬೆರಾ ತಂಡವನ್ನು ತೊರೆದ ಕಾರಣ ಕ್ಲಿಫರ್ಡ್ ಮಿರಾಂಡ ಅವರನ್ನು ಮಧ್ಯಂತರ ಕೋಚ್ ಆಗಿ ನೇಮಿಸಲಾಗಿದೆ. ಡೆರಿಕ್ ಪೆರೇರಾ ತಂಡದ ಸಲಹೆಗಾರರಾಗಿದ್ದು ರೋಮಾ ಕುನಿಲೆರ ಸಹಾಯಕ ಕೋಚ್ ಆಗಿರುವರು ಎಂದು ಐಎಸ್‌ಎಲ್‌ ಆಡಳಿತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಮಿರಾಂಡ ಮೂರು ವರ್ಷಗಳಿಂದ ತಂಡದೊಂದಿಗೆ ಇದ್ದಾರೆ. 2017ರಲ್ಲಿ ಸಹಾಯಕ ಕೋಚ್ ಆಗಿದ್ದ ಅವರು ನಂತರ ತಾಂತ್ರಿಕ ಅಧಿಕಾರಿಯಾಗಿದ್ದರು. ಕಳೆದ ಬಾರಿ 23 ವರ್ಷದೊಳಗಿನ ಭಾರತ ತಂಡದ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಹೊಸ ಕೋಚ್ ಮಾರ್ಗದರ್ಶನದಲ್ಲಿ ಗೋವಾ ತಂಡ ಫೆಬ್ರುವರಿ ಐದರಂದು ತವರಿನಲ್ಲಿ ಹೈದರಾಬಾದ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.