ಫುಟ್‌ಬಾಲ್‌: ಡಿವೈಇಎಸ್‌ ತಂಡಕ್ಕೆ ಜಯ ಬೆಂಗಳೂರು: ಲೆನಾಲ್ಡ್‌ ಕ್ಯಾರೊಲ್‌ ಗಳಿಸಿದ ಎರಡು ಗೋಲುಗಳ ಬಲದಿಂದ ಡಿವೈಇಎಸ್‌ ಎಫ್‌ಸಿ ತಂಡ ಬೆಂಗಳೂರು ಬ್ಲೂಸ್‌ ಕಪ್‌ಗಾಗಿ ನಡೆಯುತ್ತಿರುವ ಬಿಡಿಎಫ್‌ಎ ‘ಬಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಸೌತ್‌ ಯುನೈಟೆಡ್‌ ಅಕಾಡೆಮಿಯ ಮೈದಾನದಲ್ಲಿ ಗುರುವಾರ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ಡಿವೈಇಎಸ್‌ 3–0 ಗೋಲುಗಳಿಂದ ತಿಲಕ್‌ ಮೆಮೋರಿಯಲ್‌ ಎಫ್‌ಸಿ ತಂಡವನ್ನು ಸೋಲಿಸಿತು. ಲೆನಾಲ್ಡ್‌ ಅವರು 35+1 ಮತ್ತು 47ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 64ನೇ ನಿಮಿಷದಲ್ಲಿ ಗೋಲು ಬಾರಿಸಿದ ಸಂತೋಷ್‌ ಕುಮಾರ್‌ ಅವರು ಗೆಲುವಿನ ಅಂತರವನ್ನು ಹೆಚ್ಚಿಸಿದರು. ಇನ್ನೊಂದು ಪಂದ್ಯದಲ್ಲಿ ವೆಹಿಕಲ್ಸ್‌ ಎಫ್‌ಸಿ 3–1 ಗೋಲುಗಳಿಂದ ಸನ್‌ರೈಸ್‌ ಎಫ್‌ಸಿ ವಿರುದ್ಧ ಗೆದ್ದಿತು. ವೆಹಿಕಲ್ಸ್‌ ತಂಡದ ಋತ್ವಿಕ್‌ ರಮೇಶ್‌ (8ನೇ ನಿಮಿಷ), ಸಂತೋಷ್‌ (57) ಮತ್ತು ಸೆಂಥಿಲ್‌ ಕುಮಾರ್‌ (63) ತಲಾ ಒಂದು ಗೋಲು ಬಾರಿಸಿದರು. ಸನ್‌ರೈಸ್‌ ತಂಡದ ಎಂ.ಸನ್ನಿ 65ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.