ಸಹಾಯ ಹಸ್ತ ಚಾಚಿದ ಆರ್‌ಕೆಎಫ್‌ಸಿ ಶ್ರೀನಗರ: ಈ ಬಾರಿ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಗೆ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದ ದಿ ರಿಯಲ್‌ ಕಾಶ್ಮೀರ್‌ ಫುಟ್‌ಬಾಲ್‌ ಕ್ಲಬ್‌ (ಆರ್‌ಕೆಎಫ್‌ಸಿ), ಕೊರೊನಾ ವೈರಾಣುವಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಸೈನಿಕರ‌ ನೆರವಿಗೆ ಧಾವಿಸಿದೆ. ಆರ್‌ಕೆಎಫ್‌ಸಿ ಮಾಲೀಕ ಸಂದೀಪ್‌ ಚಾಟ್ಟೊ ಅವರು ಸೋಮವಾರ ಶ್ರೀನಗರದ ಡೆಪ್ಯೂಟಿ ಕಮಿಷನರ್‌ ಶಾಹೀದ್‌ ಇಕ್ಬಾಲ್‌ ಚೌಧರಿ ಅವರನ್ನು ಭೇಟಿ ಮಾಡಿ 150 ಪಿಪಿಇ ಕಿಟ್‌, 3,000 ಕೈಗವಸು ಹಾಗೂ 15,000 ಮಾಸ್ಕ್‌ಗಳನ್ನು ಕೊಟ್ಟಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.