ಫುಟ್‌ಬಾಲ್‌: ಏಡನ್ ಹಜಾರ್ಡ್‌ ವಿದಾಯ ಬ್ರಸೆಲ್ಸ್: ಬೆಲ್ಜಿಯಂ ತಂಡದ ಫಾರ್ವರ್ಡ್ ಆಟಗಾರ ಏಡನ್ ಹಜಾರ್ಡ್‌ ಅವರು ಅಂತರರಾಷ್ಟ್ರೀಯಫುಟ್‌ಬಾಲ್‌ಗೆಬುಧವಾರ ವಿದಾಯ ಘೋಷಿಸಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಬೆಲ್ಜಿಯಂ ತಂಡವು ಗುಂಪುಹಂತದಲ್ಲೇ ನಿರ್ಗಮಿಸಿತ್ತು. ಹಜಾರ್ಡ್‌ ಅವರಿಗೆ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. 31 ವರ್ಷದ ಹಜಾರ್ಡ್‌ 2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 126 ಪಂದ್ಯಗಳಿಂದ 33 ಗೋಲು ಗಳಿಸಿದ್ದರು. ರಿಯಲ್‌ ಮ್ಯಾಡ್ರಿದ್ ಕ್ಲಬ್‌ ತಂಡಕ್ಕೆ ಆಡುವ ಹಜಾರ್ಡ್‌, ಇನ್‌ಸ್ಟಾಗ್ರಾಂನಲ್ಲಿ ಈ ವಿಷಯ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.