ಕೊರೊನಾ ವೈರಸ್ ಸೋಂಕು ಪತ್ತೆ ಹಿನ್ನೆಲೆ ಫುಟ್‌ಬಾಲ್ ಕ್ಲಬ್ ವೈದ್ಯ ಆತ್ಮಹತ್ಯೆ ಪ್ಯಾರಿಸ್: ಫ್ರಾನ್ಸ್‌ನ ರೀಮ್ಸ್ ಪ್ರಾಂತ್ಯದ ಫುಟ್‌ಬಾಲ್ ಕ್ಲಬ್ ಒಂದರ ವೈದ್ಯ ಬರ್ನಾರ್ಡ್ ಗೊನ್ಜಾಲೆಸ್ ಅವರು ಕೋವಿಡ್‌ಗೆ ಒಳಗಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 60 ವರ್ಷದ ಬರ್ನಾರ್ಡ್ ಅವರಿಗೆ ಕೋವಿಡ್ ತಗುಲಿರುವುದು ಈಚೆಗೆ ಗೊತ್ತಾಗಿತ್ತು. ಅವರಿಗೆ 14 ದಿನ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಪತ್ರ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದುರೀಮ್ಸ್ ಮೇಯರ್ ಅರ್ನಾಡ್‌ ರಾಬಿನೆಟ್ ತಿಳಿಸಿದ್ದಾರೆ. ರೀಮ್ಸ್ ಕ್ಲಬ್ ಜೊತೆಬರ್ನಾರ್ಡ್ 23 ವರ್ಷ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.