ಮಹಿಳಾ ವಿಶ್ವಕಪ್‌ ಆತಿಥ್ಯ: ಬಿಡ್‌ ಹಿಂಪಡೆದ ಬ್ರೆಜಿಲ್‌ ಸಾವೊ ಪಾಲೊ: 2023ರ ಮಹಿಳಾ ವಿಶ್ವಕಪ್ ಫುಟ್‌ಬಾಲ್‌ಗೆ ಆತಿಥ್ಯ ವಹಿಸುವ ಬಿಡ್‌ ಪ್ರಕ್ರಿಯೆಯಿಂದ ಬ್ರೆಜಿಲ್‌ ಹಿಂದೆ ಸರಿದಿದೆ. ಫಿಫಾಗೆ ಅಗತ್ಯವಿರುವ ಹಣಕಾಸಿನ ಭರವಸೆಯನ್ನುಕೋವಿಡ್‌–19 ಪಿಡುಗಿನ ಪರಿಣಾಮದಿಂದಾಗಿ ನೀಡಲು ತನಗೆ ಸಾಧ್ಯವಾಗುವುದಿಲ್ಲ ಎಂದು ಆ ದೇಶ ಹೇಳಿದೆ. ಆದರೆ ಜಪಾನ್ ವಿರುದ್ಧ ಕೊಲಂಬಿಯಾ ಬಿಡ್ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ಬ್ರೆಜಿಲ್ ಫುಟ್‌ಬಾಲ್‌ ಫೆಡರೇಷನ್‌ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ದಕ್ಷಿಣ ಅಮೆರಿಕಾ ತಂಡಗಳಿಗೆ ಇದುವರೆಗೆ ಮಹಿಳಾ ವಿಶ್ವಕಪ್‌ ಆತಿಥ್ಯ ಒಲಿದಿಲ್ಲ.‌ ಇದೇ‌ 25ಕ್ಕೆ ಈ ಕುರಿತು ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಕೋವಿಡ್‌ ಮಹಾಮಾರಿಯಿಂದಾಗಿ ಬ್ರೆಜಿಲ್‌ಗೆ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.