ಬಿಜೆಪಿ ಸೇರಿ ನಿರ್ಗಮಿಸಿದ ಫುಟ್‌ಬಾಲ್ ಆಟಗಾರ ಮೆಹ್ತಾಬ್ ಕೋಲ್ಕತ್ತ: ಮಂಗಳವಾರವಷ್ಟೇ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಮಾಜಿ ಫುಟ್‌ಬಾಲ್ ಆಟಗಾರ ಮೆಹ್ತಾಬ್ ಹುಸೇನ್ ಬುಧವಾರ ನಿರ್ಧಾರ ಬದಲಿಸಿದ್ದಾರೆ. ಕೇವಲ 24 ಗಂಟೆಗಳಲ್ಲಿ ಬಿಜೆಪಿಯನ್ನು ತೊರೆದು ಅಚ್ಚರಿ ಮೂಡಿಸಿದ್ದಾರೆಂದು ’ದಿ ವೀಕ್‘ ವೆಬ್‌ಸೈಟ್ ವರದಿ ಮಾಡಿದೆ. ಕೋಲ್ಕತ್ತದ ಈಸ್ಟ್‌ ಬೆಂಗಾಲ್ ಮತ್ತು ಮೋಹನ್ ಬಾಗನ್ ಸೇರಿದಂತೆ ಪ್ರತಿಷ್ಠಿತ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಆಡಿದ್ದಾರೆ. 34 ವರ್ಷದ ಮೆಹ್ತಾಬ್, ’ದೇಶಕ್ಕೆ ಉತ್ತಮವಾದ ಕೊಡುಗೆ ನೀಡಲು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದಾಗಿ‘ ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಹೇಳಿದ್ದರು. ಆದರೆ ಯೂ ಟರ್ನ್‌ ಮಾಡಿದ ನಂತರ, ’ನನ್ನ ಆಪ್ತ ವಲಯ ಮತ್ತು ಅಭಿಮಾಗಳಲ್ಲಿ ಅನೇಕರು ನಾನು ರಾಜಕೀಯಕ್ಕೆ ಸೇರಬಾರದಿತ್ತು ಎಂದು ಅಭಿಪ್ರಾಯಪಟ್ಟರು. ಆದ್ದರಿಂದ ನಾನು ಹಿಂದೆ ಸರಿಯುತ್ತಿದ್ದೇನೆ‘ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.