ಈಸ್ಟ್ ಬೆಂಗಾಲ್ ಶತಕ: ಪ್ರಧಾನಿ ಮೋದಿ ಶುಭಾಶಯ ನವದೆಹಲಿ:ನೂರು ವರ್ಷ ಪೂರೈಸಿದ ಈಸ್ಟ್ ಬೆಂಗಾಲ್ ಫುಟ್‌ಬಾಲ್ ಕ್ಲಬ್‌ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 1920ರ ಕೋಲ್ಕತ್ತದಲ್ಲಿ ಈಸ್ಟ್ ಬೆಂಗಾಲ್ ಕ್ಲಬ್ ಆರಂಭವಾಗಿತ್ತು. ಶನಿವಾರ ಶತಮಾನೋತ್ಸವ ಆಚರಿಸಿಕೊಂಡಿತು. 131 ವರ್ಷಗಳಷ್ಟು ಹಳೆಯದಾದ ಮೋಹನ್ ಬಾಗನ್ ತಂಡವು ಈಸ್ಟ್‌ ಬೆಂಗಾಲ್‌ಗೆ ಕಟ್ಟಾ ಪ್ರತಿಸ್ಪರ್ಧಿಯಾಗಿದೆ. ’ಈಸ್ಟ್ ಬೆಂಗಾಲ್ ಎಫ್‌ಸಿಯಲ್ಲಿ ಆಡಿದ ಎಲ್ಲ ಪೀಳಿಗೆಯ ತಾರೆಗಳಿಗೆ ಶುಭಾಶಯಗಳು. ಭಾರತೀಯ ಕ್ರೀಡೆಯ ಪ್ರಮುಖ ಮೈಲುಗಲ್ಲುಗಳಲ್ಲಿ ಇದೂ ಒಂದು. ಪಶ್ಚಿಮ ಬಂಗಾಳದ ಕ್ರೀಡಾ ಪ್ರೇಮದ ಸಂಕೇತವೂ ಹೌದು. ಈಸ್ಟ್‌ ಬೆಂಗಾಲ್ ತಂಡದ ದೀವಿಗೆಯು ಕ್ರೀಡಾಂಗಣವನ್ನು ಸದಾ ಬೆಳಗುತಿರಲಿ‘ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.