ಫುಟ್‌ಬಾಲ್‌: ಗ್ಯಾರೆತ್‌ ಬೇಲ್‌ ನಿವೃತ್ತಿ ಲಂಡನ್‌ (ಎಎಫ್‌ಪಿ): ವೇಲ್ಸ್‌ ತಂಡದ ಮಿಡ್‌ಫೀಲ್ಡರ್‌ ಗ್ಯಾರೆತ್ ಬೇಲ್ ಅವರು ಕ್ಲಬ್‌ ಮತ್ತು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ‘ಕ್ಲಬ್‌ ಹಾಗೂ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ತಕ್ಷಣದಿಂದಲೇ ನಿವೃತ್ತಿಯಾಗುತ್ತಿದ್ದೇನೆ. ಸಾಕಷ್ಟು ಆಲೋಚನೆಯ ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು 33 ವರ್ಷದ ಬೇಲ್‌ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಕತಾರ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ ನ.29 ರಂದು ಇಂಗ್ಲೆಂಡ್‌ ವಿರುದ್ಧ ನಡೆದ ಹಣಾಹಣಿಯೇ ಅವರ ವೃತ್ತಿಜೀವನದ ಕೊನೆಯ ಪಂದ್ಯ ಎನಿಸಿದೆ. ಬೇಲ್‌ ಅವರು ಸೌಥಾಂಪ್ಟನ್, ಟೋಟನ್‌ಹ್ಯಾಂ, ರಿಯಲ್‌ ಮ್ಯಾಡ್ರಿಡ್‌ ಹಾಗೂ ಲಾಸ್‌ ಏಂಜೆಲೀಸ್‌ ಎಫ್‌ಸಿ ಕ್ಲಬ್‌ಗಳ ಪರ ಆಡಿದ್ದಾರೆ.‌‌‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.