ಫುಟ್‌ಬಾಲ್‌: ಬೆಂಗಳೂರು ವಾರಿಯರ್ಸ್‌ಗೆ ಗೆಲುವು ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಬೆಂಗಳೂರು ವಾರಿಯರ್ಸ್‌ ಎಫ್‌ಸಿ ತಂಡದವರು ಬಿಡಿಎಫ್‌ಎ ‘ಬಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು. ಶುಕ್ರವಾರ ನಡೆದ ಪಂದ್ಯದಲ್ಲಿ ವಾರಿಯರ್ಸ್‌ 3–0 ಗೋಲುಗಳಿಂದ ಆರ್‌.ಎಸ್‌ ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಮೊಹಮ್ಮದ್‌ ರಯಾನ್ (2ನೇ ನಿ.), ಕೆವಿನ್‌ (9ನೇ ನಿ.) ಮತ್ತು ಮೋಹಿತ್ ಸಿಂಗ್ (58 ನೇ ನಿ.) ಅವರು ವಿಜಯಿ ತಂಡದ ಪರ ಗೋಲು ಗಳಿಸಿದರು. ಸೋಮವಾರ ನಡೆಯಲಿರುವ ‘ಎ’ ಡಿವಿಷನ್‌ ಲೀಗ್ ಪಂದ್ಯಗಳಲ್ಲಿ ಸೌತ್‌ ಯುನೈಟೆಡ್ ಎಫ್‌ಸಿ– ತಿಲಕ್ ಮೆಮೋರಿಯಲ್‌ ಹಾಗೂ ಆರ್‌ಡಬ್ಲ್ಯುಎಫ್‌– ಡಿವೈಇಎಸ್‌ ತಂಡಗಳು ಎದುರಾಗಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.