ಡಿ.1ರಿಂದ ಮಹಿಳಾ ಫುಟ್‌ಬಾಲ್‌ ಶಿಬಿರ ನವದೆಹಲಿ: ಭಾರತ ಮಹಿಳಾ ಫುಟ್‌ಬಾಲ್‌ ತಂಡದ ತರಬೇತಿ ಶಿಬಿರವು ಡಿಸೆಂಬರ್ 1ರಂದು ಗೋವಾದಲ್ಲಿ ಆರಂಭವಾಗಲಿದೆ. ಕೋವಿಡ್ ಕಾಲದಲ್ಲಿ ಆರಂಭವಾಗುತ್ತಿರುವ ತಂಡದ ಮೊದಲ ಶಿಬಿರ ಇದಾಗಿದೆ. 2022ರ ಎಎಫ್‌ಸಿ ಏಷ್ಯಾ ಕಪ್‌ ಟೂರ್ನಿಯ ಪೂರ್ವಸಿದ್ಧತೆಯಾಗಿ ಈ ಶಿಬಿರ ನಡೆಯುತ್ತಿವೆ. ಮುಖ್ಯ ಕೋಚ್‌ ಮಾಯ್ಮೋಳ್ ರಾಕಿ ನೇತೃತ್ವದಲ್ಲಿ 30 ಆಟಗಾರ್ತಿಯರು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದು, ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ. 2022ರ ಏಷ್ಯಾಕಪ್‌ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.