ಫುಟ್‌ಬಾಲ್ ಆಟಗಾರ ಸಲಾಗೆ ಕೋವಿಡ್–19 ಕೈರೊ:ಈಜಿಪ್ಟ್‌ ರಾಷ್ಟ್ರೀಯ ತಂಡ ಮತ್ತು ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್‌ನ್ ಸ್ಟ್ರೈಕರ್ ಮೊಹಮ್ಮದ್ ಸಲಾ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ ಎಂದು ಈಜಿಪ್ಟ್ ತಂಡದ ವೈದ್ಯ ಮೊಹಮ್ಮದ್ ಅಬು ಎಲೆಲಾ ಭಾನುವಾರ ತಿಳಿಸಿದ್ದಾರೆ. ಅವರು ಮುಂದಿನ ವಾರ ಪೂರ್ತಿ ಪ್ರತ್ಯೇಕವಾಸದಲ್ಲಿ ಇರುವರು ಎಂದು ಅವರು ವಿವರಿಸಿದ್ದಾರೆ. ಆಫ್ರಿಕಾ ಕಪ್ ನೇಷನ್ಸ್‌ ಅರ್ಹತಾ ಟೂರ್ನಿಯಲ್ಲಿ ಟೋಗೊ ವಿರುದ್ಧದ ಪಂದ್ಯದ ಮುನ್ನಾ ದಿನ ಸಲಾ ಅವರ ಪರೀಕ್ಷಾ ವರದಿ ಬಂದಿತ್ತು. ಮುಂದಿನ ಭಾನುವಾರ ನಡೆಯಲಿರುವ ಪ್ರೀಮಿಯರ್ ಲೀಗ್ ಟೂರ್ನಿಯ ಲೀಸೆಸ್ಟರ್ ಎದುರಿನ ಪಂದ್ಯದಲ್ಲಿ ಆಡಲು ಅವರಿಗೆ ಸಾಧ್ಯವಾಗುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.