ಸ್ಪಾನಿಷ್ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಲೂಯಿಸ್‌ ವಿರುದ್ಧ ಪ್ರಕರಣ ದಾಖಲು ಜಿನೆವಾ: ಸ್ಪಾನಿಷ್ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬೇಲ್ಸ್‌ ಅವರ ವಿರುದ್ಧ ಫಿಫಾ ಶಿಸ್ತು ಸಮಿತಿಯು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದೆ. ಈಚೆಗೆ ಫಿಫಾ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಸ್ಪೇನ್ ತಂಡದ ಆಟಗಾರ್ತಿ ಜೆನಿಫರ್ ಹೆರ್ಮೊಸೊ ಅವರ ತುಟಿಗೆ ಚುಂಬಿಸಿದ್ದ ಲೂಯಿಸ್ ವ್ಯಾಪಕ ಟೇಕೆಗೊಳಗಾಗಿದ್ದರು. ಸ್ಪೇನ್ ಪ್ರಧಾನಿ ಕೂಡ ಕಿಡಿ ಕಾರಿದ್ದರು. ತಾವು ಉದ್ದೇಶಪೂರ್ವಕವಾಗಿ ಈ ರೀತಿ ವರ್ತಿಸಿಲ್ಲ. ತಂಡದ ಗೆಲುವಿನ ಸಂಭ್ರಮದಲ್ಲಿ ಈ ರೀತಿ ಆಗಿದೆ. ಅದಕ್ಕಾಗಿ ಕ್ಷಮೆ ಯಾಚಿಸುವುದಾಗಿಯೂ ಅವರು ಹೇಳಿದ್ದರು. ‘ಕ್ರೀಡೆಯಲ್ಲಿರುವ ಎಲ್ಲ ಆಟಗಾರರು, ಆಟಗಾರ್ತಿಯರ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಫೆಡರೇಷನ್ ಬದ್ಧವಾಗಿದೆ. ಯಾವುದೇ ಅಶಿಸ್ತಿನ ನಡವಳಿಕೆಯನ್ನು ಸಹಿಸುವುದಿಲ್ಲ‘ ಎಂದು ಫಿಫಾ ಹೇಳಿದೆ. ಕೊಲಂಬಿಯಾದ ವಕೀಲ ಹಾಗೂ ಕಾರ್ಮಿಕ ನ್ಯಾಯಾಲಯದ ಮಾಜಿ ಜಾರ್ಜ್ ಪೆಲಾಸಿಯೊ ನೇತೃತ್ವದ ಶಿಸ್ತು ಸಮಿತಿಯು ವಿಚಾರಣೆ ನಡೆಸಲಿದೆ. ಲೂಯಿಸ್ ಹಾಗೂ ಆಟಗಾರ್ತಿ ಜೆನಿ ಅವರನ್ನು ಸಮಿತಿಯ ಮುಂದೆ ಹಾಜರಾಗಲು ತಿಳಿಸಲಾಗಿದೆ. 46 ವರ್ಷದ ಲೂಯಿಸ್ ಐದು ವರ್ಷಗಳಿಂದ ಸ್ಪಾನಿಷ್ ಫೆಡರೇಷನ್ ನೇತೃತ್ವ ವಹಿಸಿದ್ದಾರೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.