2023: ಫೈನಲ್‌ಗೆ ಅಂಪೈರ್‌ಗಳಾಗಿ ಇಲಿಂಗ್‌ವರ್ತ್‌, ಕೆಟೆಲ್‌ಬರೊ ಅಹಮದಾಬಾದ್‌: ಇಂಗ್ಲೆಂಡ್‌ನ ರಿಚರ್ಡ್‌ ಇಲಿಂಗ್‌ವರ್ತ್‌ ಮತ್ತು ರಿಚರ್ಡ್‌ ಕೆಟೆಲ್‌ಬರೊ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಭಾನುವಾರ ಇಲ್ಲಿ ನಡೆಯಲಿರುವ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೆಟೆಲ್‌ಬರೊ ಅವರಿಗೆ ಇದು ಎರಡನೇ ವಿಶ್ವಕಪ್‌ ಫೈನಲ್ ಆಗಿದೆ. 2015ರಲ್ಲೂ ಅವರು ಫೈನಲ್‌ಗೆ ಅಂಪೈರ್‌ ಆಗಿದ್ದರು. ಆಗ ಅವರ ಜೊತೆ ಕುಮಾರ ಧರ್ಮಸೇನ (ಶ್ರೀಲಂಕಾ) ಆನ್‌ಫೀಲ್ಡ್‌ ಅಂಪೈರ್‌ ಆಗಿದ್ದರು. ಇಲಿಂಗ್‌ವರ್ತ್‌ 1992ರ ವಿಶ್ವಕಪ್‌ ಫೈನಲ್‌ನಲ್ಲಿ ಆಡಿದ್ದ ಇಂಗ್ಲೆಂಡ್‌ ತಂಡದಲ್ಲಿ ಆಟಗಾರನಾಗಿದ್ದರು ಎಂಬುದು ವಿಶೇಷ. ಟ್ರಿನಿಡಾಡ್‌ ಮತ್ತು ಟೊಬ್ಯಾಗೊದ ಜೋಯೆಲ್ ವಿಲ್ಸನ್ ಅವರು ಮೂರನೇ ಅಂಪೈರ್ ಮತ್ತು ನ್ಯೂಜಿಲೆಂಡ್‌ನ ಕ್ರಿಸ್‌ ಗಫಾನಿ ಅವರು ನಾಲ್ಕನೇ ಅಂಪೈರ್‌ ಆಗಿದ್ದಾರೆ. ಸೆಮಿಫೈನಲ್‌ಗೂ ಇವರೇ ಕಾರ್ಯನಿರ್ವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.