: ಭಾರತಕ್ಕೆ ಶುಭ ಕೋರಲು ಮರಳಿನಲ್ಲಿ ವಿಶ್ವಕಪ್ ಟ್ರೋಫಿ ರೂಪಿಸಿದ ಕಲಾವಿದ ಭುವನೇಶ್ವರ: ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟ್ರೋಫಿಯ ಮರಳು ಕಲಾಕೃತಿಯನ್ನು ಒಡಿಶಾದ ಪುರಿ ಸಮುದ್ರ ತೀರದಲ್ಲಿ ರೂಪಿಸಿದ್ದಾರೆ. ಆ ಮೂಲಕ ಪ್ರಶಸ್ತಿ ಜಯದ ನಿರೀಕ್ಷೆಯಲ್ಲಿರುವ ಭಾರತ ತಂಡಕ್ಕೆ ಶುಭ ಕೋರಿದ್ದಾರೆ. ಈ ಭಾರಿಯ ವಿಶ್ವಕಪ್‌ ಫೈನಲ್‌ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ (ನವೆಂಬರ್ 19ರಂದು) ನಡೆಯಲಿದೆ. ನಾಲ್ಕನೇ ಬಾರಿ ಫೈನಲ್‌ ಪ್ರವೇಶಿಸಿರುವ ಭಾರತ ಹಾಗೂ 6ನೇ ಪ್ರಶಸ್ತಿ ಕನಸಿನಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಹೀಗಾಗಿ 56 ಅಡಿ ಉದ್ದದ ಟ್ರೋಫಿಯನ್ನು ರೂಪಿಸಿರುವ ಸುದರ್ಶನ್ ಪಟ್ನಾಯಕ್, 'ಶುಭವಾಗಲಿ ಟೀಂ ಇಂಡಿಯಾ' ಎಂದು ಹಾರೈಸಿದ್ದಾರೆ. ಇದಕ್ಕಾಗಿ ಅವರು 500 ಸ್ಟೀಲ್‌ ಬಟ್ಟಲುಗಳು ಮತ್ತು 300 ಚೆಂಡುಗಳನ್ನು ಬಳಸಿದ್ದಾರೆ. ಮರಳು ಶಿಲ್ಪ ಕಲೆ ಸಂಸ್ಥೆಯ ವಿದ್ಯಾರ್ಥಿಗಳು ಅವರೊಂದಿಗೆ ಕೈಜೋಡಿಸಿದ್ದಾರೆ. ಆರು ಗಂಟೆಗಳಲ್ಲಿ ಕಲಾಕೃತಿಯನ್ನು ರಚಿಸಿರುವ ಪಟ್ನಾಯಕ್‌ ಅವರು, 'ಗುಜರಾತ್‌ನಲ್ಲಿ ನಡೆಯಲಿರುವ ಭಾರತ–ಆಸ್ಟ್ರೇಲಿಯಾ ಫೈನಲ್‌ ಪಂದ್ಯಕ್ಕಾಗಿ ಟೀಂ ಇಂಡಿಯಾಗೆ ಶುಭ ಕೋರಲು ವಿಶೇಷ ಕಲಾಕೃತಿ ರಚಿಸಿದ್ದೇವೆ' ಎಂದು ಹೇಳಿದ್ದಾರೆ. ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರುವ ತಂಡ ಯಾವುದು? ನ್ಯೂಜಿಲೆಂಡ್‌ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಶತಕ ಸಿಡಿಸುವ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಬಾರಿ ನೂರು ರನ್‌ ಗಳಿಸಿದ ಸಾಧನೆ ಮಾಡಿದ ವಿರಾಟ್‌ ಕೊಹ್ಲಿ ಹಾಗೂ ಅದೇ ಪಂದ್ಯದಲ್ಲಿ 7 ವಿಕೆಟ್‌ ಪಡೆದು ಮಿಂಚಿದ ಮೊಹಮ್ಮದ್‌ ಶಮಿ ಅವರ ಕಲಾಕೃತಿಗಳನ್ನೂ ಪಟ್ನಾಯಕ್‌ ರೂಪಿಸಿದ್ದರು. ಪದ್ಮ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಪಟ್ನಾಯಕ್‌, ಅಂತರರಾಷ್ಟ್ರೀಯ ಮಟ್ಟದ 65ಕ್ಕೂ ಹೆಚ್ಚು ಸ್ಪರ್ಧೆಗಳು, ಉತ್ಸವಗಳಲ್ಲಿ ಭಾಗಿಯಾಗಿದ್ದಾರೆ. ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. # - #CWC23 # . . #CricketWorldCup2023 ../4cC5tQ6VaN … 🇮🇳 # - @MdShami11 . .#CWC23 ../S1JAZqwP80 @ . 🇮🇳 🎇 50th 🏏#CWC23 | # ../lOYR2p6njh ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.