ಸೌದಿ ಪ್ರವಾಸ: ಕ್ಷಮಿಸಿ ಎಂದ ಮೆಸ್ಸಿ ಪ್ಯಾರಿಸ್ (ಎಎಫ್‌ಪಿ): ಕ್ಲಬ್‌ ಅನುಮತಿಯಿಲ್ಲದೇ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಕ್ಕೆ ಆರ್ಜೆಂಟೀನಾದ ವಿಶ್ವಕಪ್ ವಿಜೇತ ತಂಡದ ನಾಯಕ ಲಯೊನೆಲ್ ಮೆಸ್ಸಿ ಕ್ಷಮೆ ಕೇಳಿದ್ದಾರೆ. ಈ ಪ್ರವಾಸಕ್ಕಾಗಿ ಮೆಸ್ಸಿ ಅವರನ್ನು ಪಿಎಸ್‌ಜಿ ಕ್ಲಬ್ ಎರಡು ವಾರಗಳ ಅಮಾನತು ಮಾಡಿತ್ತು. ‘ನಾನೇನು ಮಾಡಿದ್ದೇನೆ ಅದಕ್ಕೆ ಕ್ಷಮೆ ಯಾಚಿಸುವೆ. ಕ್ಲಬ್ ಏನು ಮಾಡುತ್ತದೆಂದು ಕಾದುನೋಡುವೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ವಿಡಿಯೊದಲ್ಲಿ ಮೆಸ್ಸಿ ತಿಳಿಸಿದ್ದಾರೆ. ಆ ದೇಶದ ಪ್ರವಾಸೋದ್ಯಮ ಕಚೇರಿಯ ಗುತ್ತಿಗೆ ಅನ್ವಯ ಅಲ್ಲಿಗೆ ಪ್ರವಾಸ ಕೈಗೊಳ್ಳದೇ ನನಗೆ ವಿಧಿಯಿರಲಿಲ್ಲ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.