ಸಿ. ಪುಟ್ಟಯ್ಯ ಸ್ಮಾರಕ ಫುಟ್‌ಬಾಲ್‌ ಟೂರ್ನಿ: ಅಗ್ನಿಪುತ್ರ ತಂಡಕ್ಕೆ ಪ್ರಶಸ್ತಿ ಬೆಂಗಳೂರು: ಲಾಲ್ ನುನ್‌ಜಾಮ ಅವರ ಅದ್ಭುತ ಆಟದ ಬಲದಿಂದ ಎಫ್‌.ಸಿ ಅಗ್ನಿಪುತ್ರ ತಂಡವು ಬಿಡಿಎಫ್‌ಎ ಆಶ್ರಯದ ಸಿ. ಪುಟ್ಟಯ್ಯ ಸ್ಮಾರಕ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ 2–1ರಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌.ಸಿ ತಂಡವನ್ನು ಮಣಿಸಿ, ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ನಡೆದ ಪಂದ್ಯದಲ್ಲಿ ಲಾಲ್ ನುನ್‌ಜಾಮ ಅವರು 36ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅದಾದ 10 ನಿಮಿಷದಲ್ಲಿ ಲಾಲ್‌ ಅವರು (45+1ನೇ) ಮತ್ತೊಂದು ಬಾರಿ ಚೆಂಡನ್ನು ಗುರಿ ಸೇರಿಸಿ ಗೋಲಿನ ಅಂತರ ಹೆಚ್ಚಿಸಿದರು. 71ನೇ ನಿಮಿಷದಲ್ಲಿ ಸ್ಟೂಡೆಂಟ್ಸ್ ಯೂನಿಯನ್‌ ತಂಡದ ಪ್ರಾಣೇಂದ್ರ ಸಿಂಗ್‌ ಗೋಲು ದಾಖಲಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ಪ್ರಶಸ್ತಿ ಪಡೆದ ಅಗ್ನಿಪುತ್ರ ತಂಡವು ಟ್ರೋಫಿಯೊಂದಿಗೆ ₹ 25 ಸಾವಿರ, ರನ್ನರ್‌ಅಪ್‌ ಆದ ಸ್ಟೂಡೆಂಟ್ಸ್ ಯೂನಿಯನ್‌ ತಂಡ ಟ್ರೋಫಿಯೊಂದಿಗೆ ₹ 15 ಸಾವಿರ ಬಹುಮಾನ ಪಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.