ಡುರಾಂಡ್‌: ಚೆನ್ನೈಯಿನ್ ತಂಡಕ್ಕೆ ಜಯ ಗುವಾಹಟಿ: ಚೆನ್ನೈಯಿನ್ ಎಫ್‌.ಸಿ ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ 3–1ರಿಂದ ಹೈದರಾಬಾದ್‌ ಎಫ್‌.ಸಿ ತಂಡವನ್ನು ಮಣಿಸಿದರು. ಗುರುವಾರ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್‌ ತಂಡದ ನಾಯಕ ಚಿಂಗ್ಲೆನ್ ಸನಾ ಸಿಂಗ್‌ ಪೆನಾಲ್ಟಿ ಮೂಲಕ 4ನೇ ನಿಮಿಷಕ್ಕೆ ಗೋಲು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, ಚೆನ್ನೈಯಿನ್‌ ತಂಡದ ಅಲೆಕ್ಸ್‌ ಸಾಜಿ ಅವರು 6ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ, ಸಮಬಲಕ್ಕೆ ತಂದಿಟ್ಟರು. ನಂತರದಲ್ಲಿ ಕಾನರ್ ಶೀಲ್ಡ್ಸ್ (15ನೇ) ಮತ್ತು ಜೋರ್ಡಾನ್ ಮುರ್ರೆ (46 ನೇ) ಗೋಲು ಗಳಿಸಿ, ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಕೋಲ್ಕತ್ತ: ಮತ್ತೊಂದು ಪಂದ್ಯದಲ್ಲಿ ಪಂಜಾಬ್‌ ಎಫ್‌.ಸಿ ತಂಡದವರು ಗೋಲುರಹಿತವಾಗಿ ಬಾಂಗ್ಲಾದೇಶ ಆರ್ಮಿ ಫುಟ್‌ಬಾಲ್‌ ತಂಡದವರೊಂದಿಗೆ ಡ್ರಾ ಸಾಧಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.