ಪುಟ್‌ಬಾಲ್‌: ಫೈನಲ್‌ಗೆ ಅಗ್ನಿಪುತ್ರ, ಸ್ಟೂಡೆಂಟ್ಸ್‌ ಯೂನಿಯನ್‌ ಬೆಂಗಳೂರು: ಎಫ್‌.ಸಿ ಅಗ್ನಿಪುತ್ರ ಮತ್ತು ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌.ಸಿ ತಂಡಗಳು ಬಿಡಿಎಫ್‌ಎ ಆಶ್ರಯದ ಸಿ. ಪುಟ್ಟಯ್ಯ ಸ್ಮಾರಕ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪ್ರವೇಶ ಮಾಡಿವೆ. ಗುರುವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಸ್ಟೂಡೆಂಟ್ಸ್‌ ಯೂನಿಯನ್‌ ತಂಡವು 1–1ರಿಂದ ಎಫ್‌ಸಿ ಡೆಕ್ಕನ್‌ ತಂಡದೊಂದಿಗೆ ಡ್ರಾ ಸಾಧಿಸಿದ ಕಾರಣ ಪೆನಾಲ್ಟಿ ಶೂಟೌನ್‌ನ ಮೊರೆ ಹೋಗಲಾಯಿತು. ಅಲ್ಲಿ 4–3ರಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತು. ಶೋರಯವ್ ಭಾರದ್ವಾಜ್ ಅವರು 11ನೇ ನಿಮಿಷಕ್ಕೆ ಗೋಲು ಗಳಿಸಿ ಸ್ಟೂಡೆಂಟ್ಸ್‌ ತಂಡಕ್ಕೆ ಮುನ್ನಡೆ ಒದಗಿಸಿದರು. ಇದಾದ ಎರಡೇ ನಿಮಿಷಕ್ಕೆ ಡೆಕ್ಕನ್‌ ತಂಡದ ಎಂ. ಅರಿವೊಲಿ (13ನೇ) ಚೆಂಡನ್ನು ಗುರಿ ಸೇರಿಸಿ ಗೋಲನ್ನು ಸಮಬಲಗೊಳಿಸಿದರು. ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅಗ್ನಿಪುತ್ರ ತಂಡವು 4–0ಯಿಂದ ಕಿಕ್‌ಸ್ಟಾರ್ಟ್‌ ಎಫ್‌.ಸಿ ತಂಡವನ್ನು ಮಣಿಸಿತು. ಅಗ್ನಿಪುತ್ರ ತಂಡದ ‍ಪರವಾಗಿ ಲಾಲ್ನುಂಜಮಾ (11, 78ನೇ) ಎರಡು ಗೋಲು ತಂದಿತ್ತರೆ, ಪ್ರಶಾಂತ್‌ ಚೆಟ್ರಿ (61ನೇ), ಒಮೆಗಾ ವನ್‌ಲಾಲ್ ಹ್ರುಯಿತ್ಲುಂಗಾ (90+3ನೇ) ಚೆಂಡನ್ನು ಗುರಿ ಸೇರಿಸಿದರು. ಅತ್ಯಂತ ಹಳೆಯ ತಂಡವಾಗಿರುವ ಸ್ಟೂಡೆಂಟ್ಸ್ ಯೂನಿಯನ್ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಫೈನಲ್‌ ಪ್ರವೇಶ ಮಾಡಿದೆ. ಫೈನಲ್‌ ಪಂದ್ಯ ಶನಿವಾರ (ಆ.12) ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.