ಫುಟ್‌ಬಾಲ್‌: ಸೆಮಿಗೆ ಅಗ್ನಿಪುತ್ರ, ಕಿಕ್‌ಸ್ಟಾರ್ಟ್‌ ಬೆಂಗಳೂರು: ಎಫ್‌.ಸಿ ಅಗ್ನಿಪುತ್ರ ಮತ್ತು ಕಿಕ್‌ಸ್ಟಾರ್ಟ್ ಎಫ್‌.ಸಿ ತಂಡಗಳು ಬಿಡಿಎಫ್‌ಎ ಆಶ್ರಯದ ಸಿ. ಪುಟ್ಟಯ್ಯ ಸ್ಮಾರಕ ಫುಟ್‌ಬಾಲ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶ ಮಾಡಿವೆ. ಮಂಗಳವಾರ ನಡೆದ 3ನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅಗ್ನಿಪುತ್ರ ತಂಡವು 2–2ರಿಂದ ಬೆಂಗಳೂರು ಇಂಡಿಪೆಂಡೆನ್ಸ್‌ ಎಫ್.ಸಿ ತಂಡದೊಂದಿಗೆ ಡ್ರಾ ಸಾಧಿಸಿದ ಕಾರಣ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಅಲ್ಲಿ ಅಗ್ನಿಪುತ್ರ ತಂಡ 4–3ರಿಂದ ಜಯ ಸಾಧಿಸಿತು. ಅಗ್ನಿಪುತ್ರ ಪರವಾಗಿ ಒಮೆಗಾ ವ್ಯಾನ್ (51ನೇ ನಿ), ಲಾಲ್ನುಸಂಗ (68ನೇ) ಗೋಲು ತಂದಿತ್ತರೆ, ಇಂಡಿಪೆಂಡೆನ್ಸ್‌ ತಂಡದ ಎ. ಅರುಣ್‌ (8, 13ನೇ) ಎರಡು ಗೋಲು ದಾಖಲಿಸಿದರು. ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ತಂಡವು ಯಂಗ್‌ ಚಾಲೆಂಜರ್ಸ್ಸ್‌ ತಂಡವನ್ನು 4–0ಯಿಂದ ಮಣಿಸಿತು. ಏನಮ್ ಗ್ರಾಫೆನ್‌ಬರ್ಗ್ ಜುರಾ (6ನೇ), ಬೆಂಜಮಿನ್ ಲುಫೆಂಗ್ (11ನೇ), ಪ್ರಶಾಂತ್ ಕಳಿಂಗ (57ನೇ) ಮತ್ತು ಎ. ಅಜಯ್‌ (67ನೇ) ಕಿಕ್‌ಸ್ಟಾರ್ಟ್‌ ಪರ ಗೋಲು ತಂದಿತ್ತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.